ಧಾರವಾಡ ಜಿಲ್ಲೆಯ ನಿಷ್ಠಾವಂತ ಶಿಕ್ಷಕರಿಗೆ ಪ್ರಶಸ್ತಿ ಮರೀಚಿಕೆ… “ಡಿಡಿಪಿಐ” ಸಾಹೇಬ್ರೇ ಉತ್ತರಿಸ್ತೀರಾ…!!?
1 min readಧಾರವಾಡ: ಜಿಲ್ಲೆಯ ಶಿಕ್ಷಣ ಇಲಾಖೆಯು ಕೆಲವೇ ಕೆಲವರ ಕೈಯಲ್ಲಿ ಸಿಕ್ಕು ಅಧಿಕಾರಿಗಳು ಕೂಡಾ ಏನೂ ಆಗದಂತೆ ಕೂಡುವ ಸ್ಥಿತಿಗೆ ಬಂದಿದ್ದು ಸೋಜಿಗವಾದರೂ ಸತ್ಯವಾಗಿದೆ. ಹಾಗಾಗಿಯೇ, ಸಂಘದ ಹೆಸರಿನಲ್ಲಿರುವ ಶಾಲೆಗೆ ಹೋಗಿ ಪಾಠ ಮಾಡದವರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ವೇಳೆ ರಾಜ್ಯ ಪುರಸ್ಕಾರಕ್ಕೆ ಉತ್ತಮ ನಡವಳಿಕೆ, ಅತ್ಯುತ್ತಮ ಶಿಕ್ಷಕರನ್ನ ಪರಿಗಣಿಸದೇ ಶಾಲೆಗೆ ಹೋಗದೇ ಇರುವವರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಜಿಲ್ಲೆಯಲ್ಲಿ ನೂರಾರೂ ಶಿಕ್ಷಕರು ತಮ್ಮ ಶಾಲೆ, ವಿದ್ಯಾರ್ಥಿಗಳ ಅಭ್ಯುದಯಕ್ಕೆ ಹಗಲಿರುಳು ಶ್ರಮ ವಹಿಸುತ್ತಿದ್ದಾರೆ. ಆದರೆ, ಅವರನ್ನ ಕಣ್ಣೇತ್ತಿಯೂ ನೋಡದ ಸ್ಥಿತಿಗೆ ಶಾಣ್ಯಾ ಅಧಿಕಾರಿಗಳು ಬಂದಿದ್ದಾರಂತೆ.
ಡಿಡಿಪಿಐ ಕೆಳದಿಮಠ ಅವರು ಈ ಬಗ್ಗೆ ಗಮನ ಹರಿಸಬೇಕಿದೆ. ಇಲ್ಲದಿದ್ದರೇ ಪ್ರಶಸ್ತಿಗಳ ಗೌರವ ಹಾಳಾಗುತ್ತೆ. ಉತ್ತಮ ಶಿಕ್ಷಕರನ್ನ ಪರಿಗಣಿಸಿ, ಇಲ್ಲದಿದ್ದರೇ ಭವಿಷ್ಯದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ.