ಧಾರವಾಡ ಸ್ಟುಡಿಯೋ ಕಳ್ಳತನ: ಇಬ್ಬರನ್ನ ಹೆಡಮುರಿಗೆ ಕಟ್ಟಿದ ವಿದ್ಯಾಗಿರಿ ಠಾಣೆ ಪೊಲೀಸರು…!

ಧಾರವಾಡ: ನಗರದ ಮಾಳಮಡ್ಡಿಯ ಮಂಜುನಾಥಪೂರದ ಕೆವಿಜಿ ಬ್ಯಾಂಕ್ ಹತ್ತಿರದ ಸ್ವಾತಿ ಸ್ಟುಡಿಯೋ ಕಳ್ಳತನ ಮಾಡಿದ ಇಬ್ಬರನ್ನ ಬಂಧನ ಮಾಡುವಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ದತ್ತಪ್ರಸಾದ ಅಲಿಯಾಸ್ ರಾಹುಲ ಮಾಲಿಕತ್ವದ ಸ್ವಾತಿ ಸ್ಟುಡಿಯೋದಲ್ಲಿದ್ದ ಕ್ಯಾಮರಾ ಪರಿಕರಗಳನ್ನ ಕದ್ದೋಯ್ದಿದ್ದ ಧಾರವಾಡ ಲಕ್ಷ್ಮೀಸಿಂಗನಕೇರಿಯ ಸುನೀಲ ಅಲಿಯಾಸ್ ಚೋರ ಸುನ್ಯಾ ಹನಮಂತಪ್ಪ ಶೀತಿಮನಿ ಹಾಗೂ ಮಂಜುನಾಥ ಅಲಿಯಾಸ್ ಮಾವಿನಕಾಮಿ ಮಂಜ್ಯಾ ಬಸವರಾಜ ಡಂಬರಿಕೊಪ್ಪ ಉರ್ಪ್ ಆಯಟ್ಟಿ ಎಂಬುವವರನ್ನ ಬಂಧನ ಮಾಡಲಾಗಿದೆ.
ಕಳ್ಳತನ ಮಾಡಲು ಬಳಕೆ ಮಾಡಿದ್ದ ಪಲ್ಸರ್ ಬೈಕ್, ಕ್ಯಾಮರಾ ಮತ್ತು ಲೆನ್ಸಗಳಿದ್ದ ಬ್ಯಾಗ್, ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್ ನ್ನ ವಶಕ್ಕೆ ಪಡೆಯಲಾಗಿದ್ದು, ಸಿಕ್ಕ ಮಾಲುಗಳ ಮೌಲ್ಯ 4.16000 ರೂಪಾಯಿ ಎಂದು ಗುರುತಿಸಲಾಗಿದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಎಂ.ಕೆ.ಬಸಾಪೂರ ನೇತೃತ್ವದಲ್ಲಿ ಪಿಎಸ್ಐ ಸಚಿನಕುಮಾರ ದಾಸರಡ್ಡಿ, ಎಸ್.ಆರ್.ತೇಗೂರ, ಪ್ರೋ. ಪಿಎಸ್ಐ ದೇವೆಂದ್ರ ಮಾವಿನಿಂಡಿ, ಎಎಸ್ಐ ಬಿ.ಎಂ.ಅಂಗಡಿ, ಸಿಬ್ಬಂದಿಗಳಾದ ಎಂ.ಎಫ್.ನದಾಫ, ಐ.ಪಿ.ಬುರ್ಜಿ, ಆರ್.ಕೆ.ಅತ್ತಾರ, ಬಿ.ಎಂ.ಪಠಾತ್, ಎಂ.ಸಿ.ಮಂಕಣಿ, ಎಂ.ಜಿ.ಪಾಟೀಲ, ಎಂ.ವೈ.ಮಾದರ, ಡಿ.ಎಸ್.ಸಾಂಗ್ಲಿಕರ, ಎ.ಎಂ.ಹುಯಿಲಗೋಳ, ಹೆಚ್.ಕೆ.ಗೂಡುನಾಯ್ಕರ, ಹೆಚ್.ಎ.ಮಕಾಂದಾರ ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವಾತಿ ಸ್ಟುಡಿಯೋದ ಮಾಲೀಕ ರಾಹುಲ ಕಿರುಚಿತ್ರಗಳ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದು, ಮೊದಲು ಹೆಚ್ಚು ಕ್ಯಾಮರಾಗಳು ಹೋಗಿವೆ ಎಂದು ಮಾಹಿತಿ ನೀಡಿದ್ದರು. ಆದರೆ, ಪೊಲೀಸರ ಕಾರ್ಯಕ್ಷಮತೆಯಿಂದ ನೂರಕ್ಕೆ ನೂರು ವಸ್ತುಗಳನ್ನ ರಿಕವರಿ ಮಾಡಲಾಗಿದೆ.