ಧಾರವಾಡ: ಕೊಪ್ಪದಕೇರಿ “ಶಿವಾಲಯದ” ಆವರಣದಲ್ಲಿ ನೇಣು ಬಿಗಿದುಕೊಂಡು “ಶಿವನಪಾದ” ಸೇರಿದ ಅಪರಿಚಿತ…!!!
ಧಾರವಾಡ: ಕೊಪ್ಪದಕೇರಿಯಲ್ಲಿನ ಶಿವಾಲಯ ಆವರಣದಲ್ಲಿ ಅಪರಿಚಿತ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಡುಹಗಲೇ ಸಂಭವಿಸಿದೆ.
ಸುಮಾರು 35ವಯಸ್ಸಿನ ವ್ಯಕ್ತಿಯೂ ಆವರಣದೊಳಗೆ ಬಂದಿರುವ ಮರದ ಟೊಂಗೆಗೆ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದು, ಸ್ಥಳೀಯರ ಮೂಲಕ ಪೊಲೀಸರಿಗೆ ಗೊತ್ತಾಗಿದೆ.
ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೀಡಾದವನ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
