ಧಾರವಾಡದ “ಪಾಲಾಕ್ಷ ಲಾಡ್ಜ್” ನೇಣಿಗೆ ಶರಣಾದ “ಆ ಹುಡುಗ”….

ಧಾರವಾಡ: ರಾತ್ರಿಯಲ್ಲಿ ನಗು ನಗುತ್ತಲೇ ಬಂದು ರೂಮ್ ಪಡೆದಿದ್ದ ಯುವಕನೋರ್ವ ಬೆಳಗಾಗುವುದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಾಕ್ಷ ಲಾಡ್ಜನಲ್ಲಿ ನಡೆದಿದೆ.

ಮೂಲತಃ ಬೈಲಹೊಂಗಲ ತಾಲೂಕಿನ ಬೀದರಕಟ್ಟಿ ಗ್ರಾಮದ ಮಂಜುನಾಥ ನಿಂಬಾಳ್ಕರ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ತೆರಳಿದ ವಿದ್ಯಾಗಿರಿ ಠಾಣೆಯ ಪೊಲೀಸರು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ಬಿದರಕಟ್ಟಿ ಗ್ರಾಮದಿಂದ ಧಾರವಾಡಕ್ಕೆ ಬಂದು ನೇಣಿಗೆ ಶರಣಾಗಿದ್ದೇಕೆ ಎಂಬ ಮಾಹಿತಿಯನ್ನ ಪೊಲೀಸರು ಕಲೆ ಹಾಕಬೇಕಿದೆ.