ಧಾರವಾಡ: ಆ್ಯಸಿಡ್ ಕುಡಿದ ವಿದ್ಯಾರ್ಥಿ ಪ್ರಕರಣ- ಬೆನ್ನಿಗೆ ನಿಂತ “ಎಬಿವಿಪಿ”, ನಾಳೆ ಹೋರಾಟ…

ಹುಬ್ಬಳ್ಳಿ: ಧಾರವಾಡದ ಗಾಂಧಿನಗರದ ವಸತಿ ನಿಲಯದಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಆ್ಯಸಿಡ್ ಬಾಟಲ್‌ನಿಂದ ನೀರೆಂದು ಕುಡಿದು ವಿದ್ಯಾರ್ಥಿಯೋರ್ವ ತೀವ್ರ ಅನಾರೋಗ್ಯಗೊಂಡವನ ಬೆನ್ನಿಗೆ ಎಬಿವಿಪಿ ನಿಂತಿದ್ದು, ಹೋರಾಟಕ್ಕೆ ಸನ್ನದ್ಧವಾಗಿದೆ.
ಎಕ್ಸಕ್ಲೂಸಿವ್ ವೀಡಿಯೋ…
ಕಿಮ್ಸ್‌ಸಿಆರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಬೇರ ಲಮಾಣಿ ಎಂಬ ವಿದ್ಯಾರ್ಥಿ, ಅಂಜುಮನ್ ಕಾಲೇಜಿನಲ್ಲಿ ಬಿಎ ವಿದ್ಯಾಭ್ಯಾಸ ಮಾಡುತ್ತಿದ್ದು, ಆತನ ಸ್ಥಿತಿಗೆ ಎಬಿವಿಪಿ ಮಮ್ಮುಲ ಮರುಗಿ, ನಾಳೆ ಹೋರಾಟ ಮಾಡಲು ಮುಂದಾಗಿದ್ದಾರೆ.
ಕಿಮ್ಸಗೆ ಭೇಟಿ ನೀಡಿದ ವಿದ್ಯಾನಂದ ಸ್ಥಾವರಮಠ, ಗುರು ಹಿರೇಮಠ, ಸಚಿನ್ ಕೋಟ್ಯಾಳ, ಭರಮ್ ಗೌಡ್ರ ಅಯ್ಯನಗೌಡ್ರು ಅವರುಗಳು, ವಿದ್ಯಾರ್ಥಿ ಹಾಗೂ ಕುಟುಂಬಕ್ಕೆ ಧೈರ್ಯ ಹೇಳಿದ್ದಲ್ಲದೇ ಜೊತೆಗೆ ಇರುವುದಾಗಿ ಭರವಸೆ ನೀಡಿದ್ದಾರೆ.