ಧಾರವಾಡದಲ್ಲಿ ಹಾಡುಹಗಲೇ “ನಡುಬೀದಿಯಲ್ಲಿ ಚಾಕು ಇರಿತ” ಮೂವರಿಗೆ ಗಾಯ…

ಧಾರವಾಡ: ನಗರದ ಜನನಿಬೀಡ ರಸ್ತೆಯಲ್ಲಿ ಒಂದಾದ ಕೆಸಿಡಿಗೆ ಹೋಗುವ ಮಾರ್ಗದಲ್ಲಿ ಹಾಡುಹಗಲೇ ಚಾಕು ಇರಿತವಾಗಿದ್ದು, ಮೂವರು ಯುವಕರು ಗಾಯಗೊಂಡಿದ್ದಾರೆ.
ಸಾಹಿಲ್ ಸೇರಿದಂತೆ ಮೂವರು ಗಾಯಗೊಂಡಿದ್ದು, ಮೂವರಿಗೆ ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ.
ಯುವಕರಲ್ಲಿ ಜಗಳ ವಿಕೋಪಕ್ಕೆ ಹೋಗಿದ್ದು, ನಿಖರವಾದ ಕಾರಣ ಗೊತ್ತಾಗಿಲ್ಲ. ಪ್ರಕರಣದಲ್ಲಿ ಹತ್ಯೆಯಾಗಿದ್ದ ಜಿದ್ದಿ ಮಲೀಕ್ನ ಮಗನಿಗೂ ಗಾಯವಾಗಿದೆ ಎಂದು ಹೇಳಲಾಗಿದ್ದು, ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.