ಧಾರವಾಡ “ಶ್ರೀನಿವಾಸ ಥೇಟರ್”ನಲ್ಲಿ “ಟಗರುಪಲ್ಯ ಚಾಕೋಲೇಟ್”- ಚಿನ್ನ ದೋಚಿದ್ದವ “ಅಂದರ್”…
1 min readಧಾರವಾಡ: ತಾನು ಹೋಗಬೇಕಾಗಿದ್ದ ರೈಲು ತಪ್ಪಿದೆ ಎಂದು ವ್ಯಕ್ತಿಯೋರ್ವನನ್ನ ಸಿನೇಮಾ ಹಾಲ್‌ಗೆ ಕರೆದುಕೊಂಡು ಹೋಗಿ ‘ಮತ್ತು’ ಬರುವ ಚಾಕೊಲೇಟ್ ನೀಡಿ ಬಂಗಾರದ ಸರವನ್ನ ದೋಚಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಧಾರವಾಡ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಪ್ಪಿನಬೆಟಗೇರಿ ಮಲ್ಲಿಕಾರ್ಜುನ ನಾಗಪ್ಪ ವಿಜಾಪುರ ಎಂಬುವರನ್ನ ಡಾಲಿ ಧನಂಜಯ ನಿರ್ಮಾಣದ ಟಗರುಪಲ್ಯ ಸಿನೇಮಾವನ್ನ ತೋರಿಸಲು ತಾನೇ ಹಣ ಕೊಟ್ಟು ಟಿಕೆಟ್ ತೆಗೆದುಕೊಂಡ ಬಿಹಾರದ ಮಹ್ಮದ ಷಮ್‌ಶೇರ್ ಅಲಿಯಾಸ್ ಷಮ್‌ಶೇರ್ ಶಹಾ ಎಂಬಾತ ಕರೆದುಕೊಂಡು ಹೋಗಿದ್ದಾನೆ. ತದನಂತರ ಚಾಕೊಲೇಟ್ ನೀಡಿ ಮತ್ತು ಬರುವಂತೆ ಮಾಡಿ, ಕೊರಳಲ್ಲಿದ್ದ ಚಿನ್ನದ ಸರವನ್ನ ದೋಚಿಕೊಂಡು ಪರಾರಿಯಾಗಿದ್ದ.
ಈತನ ಮಾಹಿತಿ ಕಲೆ ಹಾಕಿದ ಧಾರವಾಡ ಶಹರ ಠಾಣೆಯ ಪೊಲೀಸರು ಆತನನ್ನ ಬಂಧಿಸಿ 15 ಗ್ರಾಂ ಚಿನ್ನದ ಸರವನ್ನ ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನ ಬಂಧಿಸುವಲ್ಲಿ ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಧಾರವಾಡ ಶಹರ ಪೊಲೀಸ ಠಾಣೆಯ ಎನ್.ಸಿ.ಕಾಡದೇವರ ಪೊಲೀಸ ಇನ್ಸಪೆಕ್ಟರ. ಪಿ.ಎಸ್.ಐ ಚಂದ್ರಶೇಖರ ಮದರಖಂಡಿ, ಸಿಬ್ಬಂದಿ ಜನರಾದ. ಡಿ.ಬಿ.ಫಾಳರೆಡ್ಡಿ ಸಿಹೆಚ್-1421, ಮಂಜುನಾಥ ಗದ್ದಿಕೇರಿ ಸಿಹೆಚ್‌ಸಿ-1573, ಎನ್.ಹೆಚ್.ಗುಣಮನಿ ಸಿಹೆಚ್‌ಸಿ-1605. ಜಿ.ಜಿ.ಚಿಕ್ಕಮಠ ಸಿಹೆಚ್-1609, ಐ.ಪಿ ಬುರ್ಜಿ ಸಿಹೆಚ್-1828, ಪಿ.ಎಸ್.ತಿರ್ಲಾಪೂರ ಸಿಪಿಸಿ-3104, ಶ್ರೀಧರ.ಬಿ.ವಡ್ಡರ ಸಿಪಿಸಿ-3141, ಎಮ್.ಆರ್.ಪ್ಯಾಲಿ ಸಿಪಿಸಿ-3263, ಮತ್ತು ತಾಂತ್ರಿಕ ವಿಭಾಗ ಎಮ್.ಎಸ್.ಚಿಕ್ಕಮಠ ಸಿಹೆಚ್-1581, ಆರ್.ಕೆ.ಭಡಂಕರ ಸಿಹೆಚ್-1566, ಹಾಗೂ ಆರ್.ಎಸ್.ಗೋಮಪ್ಪನವರ ಸಿಪಿಸಿ-2338 ಯಶಸ್ವಿಯಾಗಿದ್ದಾರೆ. ಇವರುಗಳಿಗೆ ಪೊಲೀಸ್ ಕಮೀಷನರ್ ರೇಣುಕಾ ಕೆ ಸುಕುಮಾರ ಶ್ಲಾಘಿಸಿ ಬಹುಮಾನವನ್ನು ಘೋಷಿಸಿದ್ದಾರೆ.