Posts Slider

Karnataka Voice

Latest Kannada News

ಧಾರವಾಡದ 2ಸುತ್ತು ಗುಂಡಿನ ಅಸಲಿ ಕಹಾನಿ… ಬಿಜೆಪಿ ಮುಖಂಡನ ಪುತ್ರನ ಪಾತ್ರವೇನು…!?

1 min read
Spread the love

ಧಾರವಾಡ: ಶುಕ್ರವಾರ ಬೆಳಗಿನ ಜಾವ ಒಂದರಿಂದ ಒಂದವರೆಯೊಳಗೆ ಆರ್.ಎನ್.ಶೆಟ್ಟಿ ಮೈದಾನದ ಬಳಿ ನಡೆದ ಗುಂಡಿನ ದಾಳಿಯ ಪ್ರಕರಣದಲ್ಲಿ ಎರಡು ಕಡೆಯ ನಾಲ್ವರನ್ನ ಬಂಧಿಸಿರುವ ಪೊಲೀಸರು, ಅವರನ್ನ ಆರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಪೈನಾನ್ಸಿಯರ್ ಅಭಿಷೇಕ ಬಡ್ಡಿ ಎರಡು ಸುತ್ತು ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದರೇ, ಇನ್ನುಳಿದ ಪ್ರಜ್ವಲ್, ಗಣೇಶ ಹಾಗೂ ದಾನೇಶ ವಿರುದ್ಧವೂ ಅದೇ ಪ್ರಕರಣ ದಾಖಲಾಗಿದೆ. ಹೀಗಾಗಿ, ಘಟನೆಯ ಹಿಂದಿನ ಷಡ್ಯಂತ್ರ ಅರಿಯಲು ಪೊಲೀಸರು ಕೋರ್ಟ್ ಮೂಲಕ ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಬಿಜೆಪಿಯ ಮುಖಂಡ ಹಾಗೂ ಸಿಂಡಿಕೇಟ್ ಸದಸ್ಯರಾಗಿದ್ದ ಕಲ್ಮೇಶ ಹಾವೇರಿಪೇಟೆ ಅವರ ಪುತ್ರ ಪ್ರಜ್ವಲ್, ಘಟನೆ ವೇಳೆಯಲ್ಲಿ ಕಾರು ಚಲಾಯಿಸುತ್ತಿದ್ದ. ಆತ ಸ್ಬಲ್ಪದರಲ್ಲಿ ಪಾರಾಗಿದ್ದಾನೆಂದು ಹೇಳಲಾಗಿದೆ.

ಅಭಿಷೇಕ್ ಬಡ್ಡಿಮನಿ ವಿರುದ್ಧವಾಗಿ ಬಂಧನವಾಗಿರುವ ಮೂವರು “ಆ ವ್ಯಕ್ತಿಯ” ಜಿಮ್‌ಗೆ ಹೋಗುತ್ತಿದ್ದರು. ಈಗ ಇದೇ ವಿಷಯ ಚರ್ಚೆಗೆ ಮುನ್ನೆಲೆಯಾಗಿದೆ. ಆ ವ್ಯಕ್ತಿಗೂ ಈ ಅಭಿಷೇಕನಿಗೂ ಯಾವ ದ್ವೇಷಯಿತ್ತು ಅಥವಾ ಇದು ಸಂಬಂಧವೇ ಅಲ್ಲಾ ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

“ಧಾರವಾಡ ದಾರಿ ಆತು… ಹುಬ್ಬಳ್ಳಿ ಹುಡ್ದಿ ಆತು” ಅನ್ನೋ ಮಾತನ್ನ ಮೀರಿ ಸಣ್ಣ ಸಣ್ಣ ವಯಸ್ಸಿನವರು ಧಾರವಾಡವನ್ನೇ “ಹುಡ್ದಿ” ಮಾಡಲು ಹೊರಟಿದ್ದು ತೀರಾ ಬೇಸರದ ಸಂಗತಿಯಾಗಿದೆ. ಇಂತಹದ್ದನ್ನ ಪೊಲೀಸ್ ಕಮೀಷನರ್ ಶಶಿಕುಮಾರ್ ಪಡೆ ಸರಿಯಾಗಿಯೇ ನಿಭಾಯಿಸತ್ತೆ ಎನ್ನುವ ನಂಬಿಕೆ ಪ್ರಜ್ಞಾವಂತರಲ್ಲಿದೆ.


Spread the love

Leave a Reply

Your email address will not be published. Required fields are marked *