ಧಾರವಾಡ-71 ಮತಕ್ಷೇತ್ರದ ಶಾಲೆಗಳಿಗೆ “ಇಂದು” ರಜೆ ಘೋಷಣೆ

ಧಾರವಾಡ: ಶಿಕ್ಷಕರ ದಿನಾಚರಣೆ ಅಂಗವಾಗಿ ಧಾರವಾಡ-71 ಮತಕ್ಷೇತ್ರದ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಶಿಕ್ಷಕರ ದಿನಾಚರಣೆ ನಡೆಸುವಂತೆ ಹೇಳಿದ್ದರಿಂದ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪಾ ಟಿ.ಕೆ ಅವರ ಮೌಖಿಕ ಆದೇಶದ ಮೇರೆಗೆ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕರು ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
ಅಷ್ಟೇ ಅಲ್ಲ, ಮುಂದೆ ಯಾವತ್ತೋ ರಜೆ ದಿನವಿದ್ದಾಗ ಶಾಲೆ ನಡೆಸುವ ಷರತ್ತು ಕೂಡಾ ಹಾಕಿ ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳ ಚಾಣಾಕ್ಷತನ ಆದೇಶದಲ್ಲಿ ಕಂಡು ಬರುತ್ತಿದೆ.