ಧಾರವಾಡದ ರೌಡಿಷೀಟರ್ “ಅಜಯ ಕೊರವರ” ಗಡಿಪಾರು: ಪೊಲೀಸ್ ಕಮೀಷನರ್ ಆದೇಶ….

ಧಾರವಾಡ: ಅಕ್ರಮವಾದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ರೌಡಿಯೊಬ್ಬನನ್ನ ಧಾರವಾಡ ಜಿಲ್ಲೆಯಿಂದ ಗಡಿಪಾರು ಮಾಡಿ ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ.
ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಅಕ್ರಮಗಳಲ್ಲಿ ತೊಡಗಿದ್ದ ಅಜಯ ಪರಶುರಾಮ ಕೊರವರ ಎಂಬಾತನನ್ನ ಇದೇ ತಿಂಗಳ 23 ರಿಂದ ಆರು ತಿಂಗಳವರೆಗೆ ಗಡಿಪಾರು ಮಾಡಲಾಗಿದೆ.
ಅಜಯ, ಕೋಲಾರ ಜಿಲ್ಲೆಯ ಮುಳಬಾಗಿಲು ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಕಳೆದ ವಾರವಷ್ಟೇ ತಿರುಪತಿ ಎಂಬಾತನನ್ನ ಗಡಿಪಾರು ಮಾಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.