ಡಿಸಿ ಮಾಡಿಸಬೇಕಾಗಿದ್ದನ್ನ “ಧಾರವಾಡ ಪತ್ರಕರ್ತರೇ” ಮಾಡಿಬಿಟ್ಟರು…!!!!
1 min readಧಾರವಾಡ: ಇಡೀ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರದಲ್ಲಿ ಮುಳುಗಿದ್ದು, ಧಾರವಾಡ ಜಿಲ್ಲಾಡಳಿತ ಮಾತ್ರ ಹೊದ್ದುಕೊಂಡು ಮಲಗಿಬಿಟ್ಟಿದೆ. ಅದೇ ಕಾರಣಕ್ಕೆ ಪತ್ರಕರ್ತರೇ ಮುಂದಾಗಿ ತಮ್ಮಲ್ಲಿನ “ಮಹಾತ್ಮ ಪ್ರೇಮ” ವನ್ನ ಪ್ರದರ್ಶಿಸಿದ್ದಾರೆ.
ಧಾರವಾಡ ನಗರವನ್ನ ಸ್ವಚ್ಚಂದಗೊಳಿಸಲು ಜಿಲ್ಲಾಡಳಿತ ಎಷ್ಟು ಶ್ರಮ ವಹಿಸಿದೆ ಎಂದು ತಿಳಿಯಬೇಕಾದರೇ, ತಾವೂ ಈ ಮಾಹಿತಿಯನ್ನ ಸಂಪೂರ್ಣವಾಗಿ ಓದಲೇಬೇಕು.
ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯಿರುವ ಆವರಣ ಸಂಪೂರ್ಣವಾಗಿ ಗಲೀಜಿನಿಂದ ತುಂಬಿ ಹೋಗಿತ್ತು. ಇಂದಿನಿಂದ ಮೂರು ದಿನಗಳವರೆಗೆ ಅಮೃತ ಮಹೋತ್ಸವ ಆಚರಿಸಲು ಮುಂದಾಗಿದ್ದರೂ, ಡಿಸಿಯವರು ಮಾತ್ರ ಈ ಆವರಣವನ್ನ ಸ್ವಚ್ಚಗೊಳಿಸಿರಲಿಲ್ಲ. ಹಾಗಾಗಿಯೇ ಫೀಲ್ಡಿಗಿಳಿದಿದ್ದು ಧಾರವಾಡದ ಪತ್ರಕರ್ತರು.
ಮೀಡಿಯಾ ಕ್ಲಬ್ ಅಧ್ಯಕ್ಷ ಮುಸ್ತಫಾ ಕುನ್ನಿಭಾವಿ ಅವರು ಸ್ವತಃ ಕಸಬರಿಕೆ ಹಿಡಿದು ಸ್ವಚ್ಚಗೊಳಿಸಿದರು. ಈ ಸಮಯದಲ್ಲಿ ಮಂಜುನಾಥ ಅಂಗಡಿ, ಪರಮೇಶ್ವರ ಅಂಗಡಿ, ಪ್ರಶಾಂತ ದಿನ್ನಿ, ಗುರು ಕಟ್ಡಿಮನಿ, ಅರ್ಬಾಜ್ ಪಠಾಣ, ಗುರುರಾಜ ಯಾದವ, ಶ್ರೀಧರ ಮುಂಡರಗಿ, ಜಾವೇದ ಅಧೋನಿ, ಮಂಜುನಾಥ ಕವಳಿ, ಓಂಕಾರಿ ಸೇರಿದಂತೆ ಬಹುತೇಕ ಎಲ್ಲ ಪತ್ರಕರ್ತರು ಸಾಥ್ ನೀಡಿದ್ರು.
ಅಮೃತ ಮಹೋತ್ಸವದ ಸಡಗರದಲ್ಲಿ “ಮಹಾತ್ಮರನ್ನೇ” ಜಿಲ್ಲಾಡಳಿತ ಮರೆತರು, ಸಾಮಾಜಿಕ ಕಾಳಜಿ ಹೊಂದಿದ ಪತ್ರಕರ್ತರು ಮಾತ್ರ, ‘ಮಹಾತ್ಮನ’ ಸ್ಮರಣೆ ಮಾಡುವ ಮೂಲಕ ಮಾದರಿಯಾದರು.