ಧಾರವಾಡ ಅತ್ಯಾಚಾರ ಪ್ರಕರಣ- ದೂರು ನೀಡಲು ಬಂದವರನ್ನ ದೂರ ಕಳಿಸಿದವರೀಗ ಹುಡುಕಾಟ ನಡೆಸಿದ್ದಾರೆ…!

ಧಾರವಾಡ: ನಗರದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣವೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಅಂದು ದೂರು ದಾಖಲು ಮಾಡಿಕೊಳ್ಳದೇ ತಳ್ಳಲ್ಪಟ್ಟ ಯುವತಿಯ ಹುಡುಕಾಟ ಆರಂಭಿಸಿದ್ದಾರೆ.
ಅಂದು ತನಗಾಗಿರುವ ಅನ್ಯಾಯವನ್ನ ಎಳೆಎಳೆಯಾಗಿ ಬಿಡಿಸಿ ಹೇಳಿದ ಮೇಲೆಯೂ ಆ ಮಹಾನ್ ಮಹಿಳಾ ಅಧಿಕಾರಿ ಪ್ರಕರಣ ದಾಖಲು ಮಾಡದೇ ಧಾರವಾಡವನ್ನೇ ಬಿಡುವಂತೆ ಮಾಡಿದ್ದು, ಕರ್ನಾಟಕವಾಯ್ಸ್.ಕಾಂನಲ್ಲಿ ಮಾಹಿತಿ ಹೊರಬಿದ್ದ ನಂತರ ಮತ್ತೆ ಅನ್ಯಾಯಕ್ಕೊಳಗಾದ ಯುವತಿಯನ್ನ ಕರೆಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ.
ಓರ್ವ ಯುವತಿಗೆ ಆಗಿರುವ ಅನ್ಯಾಯವನ್ನ ಸಂಪೂರ್ಣವಾಗಿ ಕೇಳಿಯೂ ಹೊರಗೆ ಕಳಿಸಲಾಗಿದೆ. ಇದಕ್ಕೆ ಕಾರಣವಾಗಿದ್ದು, ಯುವತಿಯ ಜಾತಿ ಅನ್ನೋದು ನ್ಯಾಯ ಕೊಡಿಸಲು ಬಂದವರ ಹೇಳಿಕೆ. ಏಕೆಂದರೆ, ಯುವತಿಯು ಪರಿಶಿಷ್ಟ ಜಾತಿಯವರಾಗಿದ್ದರಿಂದ ಹಿರಿಯ ಅಧಿಕಾರಿಯೇ ಐಓ ಆಗಬೇಕಾಗತ್ತೆ. ಅದೇ ಕಾರಣದಿಂದಲೇ ಪ್ರಕರಣ ದಾಖಲು ಮಾಡದೇ ಹೊರ ಹಾಕಲಾಗಿದೆ ಅನ್ನೋದು ದೂರು.
ಬಾಗಲಕೋಟೆ ಜಿಲ್ಲೆಯ ಬದಾಮಿ ಪಟ್ಟಣದ ಯುವತಿಯಿಂದ ಮತ್ತೆ ದೂರು ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಆದರೆ, ಅವತ್ತು ಏಕೆ ಹಿರಿಯ ಮಹಿಳಾ ಅಧಿಕಾರಿ ಪ್ರಕರಣ ದಾಖಲು ಮಾಡಲು ಏಕೆ ಸೂಚನೆ ನೀಡಿಲ್ಲವೆಂಬ ಪ್ರಶ್ನೆ ಹಾಗೆ ಉಳಿದಿದೆ.
ಅನ್ಯಾಯವಾಗಿರುವುದು ಯುವತಿಗೆ. ಅಷ್ಟೇ ಅಲ್ಲ, ಹಾಗೇ ಮಾಡಿ ಪೊಲೀಸರಿಗೆ ಭೇಟಿಯೂ ಆಗಿರುವ ಕಿರಾತಕರು ಅರಾಮಾಗಿ ಅಲೆದಾಡುತ್ತಿದ್ದಾರೆ. ಪೊಲೀಸರೇ, ಇದು ನ್ಯಾಯವಾ… ಆರೋಪಿಗಳು ಮತ್ತೆ ಹೀಗೆ ಮಾಡಲ್ಲಾ ಎಂಬ ನಂಬಿಕೆಯಿಂದ ಹೀಗೆ ನಡೆದುಕೊಳ್ಳುತ್ತಿದ್ದೀರಾ.. ಮೇಡಂ… ಜೀ … ಕ್ಯಾ ಹುವಾ…