ಧಾರವಾಡದಲ್ಲಿ ರಕ್ಷಿತ್ ಶೆಟ್ಟಿ- “ಸಪ್ತ ಸಾಗರದಾಚೆ ಎಲ್ಲೋ”…

ಧಾರವಾಡ: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಪ್ತ ಸಾಗರದಾಚೆ ಎಲ್ಲೋ ಸಿನೇಮಾದ ಪ್ರಮೋಷನ್‌ಗಾಗಿ ಚಿತ್ರನಟ ರಕ್ಷಿತ ಶೆಟ್ಟಿ ಧಾರವಾಡಕ್ಕೆ ಆಗಮಿಸಿ, ಪ್ರೇಕ್ಷಕರೊಂದಿಗೆ ಕೆಲಕಾಲ ಸಮಯವನ್ನ ಕಳೆದರು.
ಧಾರವಾಡದಲ್ಲಿ ನೂತನವಾಗಿ ಆರಂಭಗೊಂಡಿರುವ ಐನಾಕ್ಸ್ ಥೇಟರ್‌ನಲ್ಲಿ ರಕ್ಷಿತ್ ಶೆಟ್ಟಿ ಪ್ರತ್ಯಕ್ಷವಾಗಿದ್ದರು. ತಮ್ಮದೇ ಆದ ಧಾಟಿಯಲ್ಲಿ ಪ್ರೇಕ್ಷಕರೊಂದಿಗೆ ಮಾತುಕತೆ ನಡೆಸಿದರು.
ಎಕ್ಸಕ್ಲೂಸಿವ್ ವೀಡಿಯೋ..
ಥೇಟರ್‌ಗೆ ಮತ್ತಷ್ಟು ಪ್ರೇಕ್ಷಕರನ್ನ ಕಳಿಸಿಕೊಡಿ ಎಂದು ಕೇಳಿಕೊಂಡ ರಕ್ಷಿತ ಶೆಟ್ಟಿ ಜೊತೆಗೆ ಸಪ್ತ ಸಾಗರದಾಚೆ ಸಿನೇಮಾ ತಂಡವೂ ಹಾಜರಿತ್ತು.