ಧಾರವಾಡ “ಖಾಲಿ ಗ್ರೌಂಡಲ್ಲಿ” ಕನ್ನಡ ರಾಜ್ಯೋತ್ಸವ- 15000 ಸಾವಿರದ ಟಾರ್ಗೆಟ್… ಸೇರಿದ್ದು 1500…!?
1 min readಧಾರವಾಡ: ಕನ್ನಡಾಂಭೆಯ ದಿನವನ್ನ ಅಕ್ಕರೆ ಮತ್ರು ಪ್ರೀತಿಯಿಂದ ಆಚರಿಸುವ ಮನೋಭಾವನೆ ಇಲ್ಲದ ಕಾರಣದಿಂದ ಇಂದು ಧಾರವಾಡ ಆರ್.ಎನ್.ಶೆಟ್ಟಿ ಮೈದಾನ ಖಾಲಿ ಖಾಲಿಯಾಗಿಯೇ ಆಚರಣೆ ಮಾಡುವ ಸ್ಥಿತಿಗೆ ತಲುಪಿದ್ದು ಕಂಡು ಬಂದಿತು.
ಶಿಕ್ಷಣ ಇಲಾಖೆಯ ಡಿಡಿಪಿಐ ಅವರಿಗೆ ಏನೇ ಹೇಳಿದರೂ ಪ್ರಯೋಜನವಿಲ್ಲ ಮತ್ತು ನಾಮಕಾವಾಸ್ತೆ ಆಚರಣೆ ನಡೆಸುತ್ತಿರುವುದು ಕಂಡು ಬಂದಿತು.
ವೀಡಿಯೋ ಪೂರ್ಣ ನೋಡಿ…
ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ, ರಾಜ್ಯೋತ್ಸವದ ಆಚರಣೆಗೆ ಸಿದ್ಧತೆ ಹೇಗಿರಬೇಕೆಂದು ಹೇಳಿಕೊಡುವ ಸ್ಥಿತಿ ಬಂದಿದೆ.
ಧಾರವಾಡದಲ್ಲಿ 15ಸಾವಿರ ಮಕ್ಕಳು, ಶಿಕ್ಷಕರನ್ನ ಮೈದಾನಕ್ಕೆ ಕರೆತರುವ ಕರ್ತವ್ಯ ನಿಷ್ಠೆ ಡಿಡಿಪಿಐ ಅವರಿಗೆ ಇಲ್ಲದೇ ಇರುವುದರಿಂದ ಇಂದು 1500 ಶಿಕ್ಷಕರು, ಮಕ್ಕಳು ಸೇರಿಲ್ಲ ಎಂಬುದು ಗ್ರೌಂಡ್ ಸಾಕ್ಷಿ ಹೇಳುತ್ತಿತ್ತು.