ಧಾರವಾಡದಲ್ಲೇ ಸಿಡಿಲು- ಕೃವಿವಿಯಲ್ಲಿ ಮಹಿಳೆ ಸಾವು
1 min readಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಪ್ರಲಾಪ ಹೆಚ್ಚಾಗುತ್ತಿದ್ದು, ಧಾರವಾಡ ಕೃಷಿ ವಿಶ್ವಿದ್ಯಾಲಯದಲ್ಲೇ ಮಹಿಳೆಯೋರ್ವಳು ಸಿಡಿಲಿಗೆ ಪ್ರಾಣವನ್ನ ಕಳೆದುಕೊಂಡ ಘಟನೆ ನಡೆದಿದೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕಳೆದ 11 ವರ್ಷಗಳಿಂದ ಹಂಗಾಮಿ ನೌಕರರಾಗಿ ಕೆಲಸ ನಿರ್ವಹಣೆ ಮಾಡಿಕೊಂಡು ಬಂದಿದ್ದ ಸರಸ್ವತಿ ಪಾಟೀಲ ಎಂಬ ಮಹಿಳೆಯೇ ಸಿಡಿಲಿಗೆ ಪ್ರಾಣ ಕಳೆದುಕೊಂಡಿದ್ದಾಳೆ.
ಕೃಷಿ ವಿಶ್ವವಿದ್ಯಾಲಯದ ಬೀಜ ಘಟಕದಲ್ಲಿ ಕೆಲಸ ನಿರ್ವಹಣೆ ಮಾಡುವಾಗ ಘಟನೆ ನಡೆದಿದ್ದು, ಸಿಡಿಲು ಬಡಿದ ಕೆಲವೇ ಕ್ಷಣಗಳಲ್ಲಿ ಪ್ರಾಣ ಹೋಗಿದೆ. ಘಟನೆ ನಡೆಯುತ್ತಿದ್ದಂತೆ ಆಕೆಯನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು.
ಹಂಗಾಮಿ ನೌಕರರಾಗಿ ಕಾರ್ಯನಿರ್ವಹಣೆ ಮಾಡುತ್ತಿರುವುದರಿಂದ ಸರಕಾರದ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಸರಸ್ವತಿ ಪಾಟೀಲಳ ಕುಟುಂಬ ಕೂಡಾ ಮತ್ತಷ್ಟು ತೊಂದರೆಯಲ್ಲಿ ಸಿಲುಕಿದಂತಾಗಿದೆ.