ಧಾರವಾಡ: 15 ದಿನ- 18ಕೇಸ್- 19ಬಂಧನ- 30ಕೆಜಿ ಗಾಂಜಾ ವಶ
ಧಾರವಾಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸುಮಾರು 18 ಗಾಂಜಾ ಪ್ರಕರಣಗಳು ಪತ್ತೆಯಾಗಿದ್ದು, 30ಕೆಜಿಯಷ್ಟು ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಮಲ್ಲಿಗವಾಡ ಗ್ರಾಮದ ಹಿತ್ತಲಿನಲ್ಲಿ ಬೆಳೆದ ಗಾಂಜಾವನ್ನ ಬೆಳೆದ ರಾಮನಗೌಡ ಪಾಟೀಲ ಎಂಬಾತನನ್ನ ಹಿಡಿದು ಹಸಿ ಗಾಂಜಾವನ್ನ ವಶಕ್ಕೆ ಪಡೆಯಲಾಗಿತ್ತು. ತದನಂತರ ನರೇಂದ್ರ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದವರನ್ನ ಮಾಲು ಸಮೇತ ಬಂಧನ ಮಾಡಲಾಗಿತ್ತು.
ಜಮೀನಿನಲ್ಲಿ ಬೆಳೆದ ಹಸಿ ಗಾಂಜಾವನ್ನ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿತ್ತು. ಇಂತಹ ವಿವಿಧ ರೀತಿಯ ಒಟ್ಟು 18 ಪ್ರಕರಣಗಳನ್ನ NDPS ಠಾಣೆಯವರು ಪತ್ತೆ ಹಚ್ಚಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, 30ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದಿರುವುದನ್ನ ಖಚಿತಪಡಿಸಿದ್ದಾರೆ.