ಧಾರವಾಡದಲ್ಲಿ ನಡೆಯುತ್ತಿದ್ದ ಪೌರಕಾರ್ಮಿಕರ ಉಪವಾಸ ಸತ್ಯಾಗ್ರಹ ಅಂತ್ಯ

ಧಾರವಾಡ: ಕಳೆದ 20 ದಿನಗಳಿಂದಲೂ ನಡೆಯುತ್ತಿದ್ದ ಪೌರಕಾರ್ಮಿಕರ ಉಪವಾಸ ಸತ್ಯಾಗ್ರಹ ಅಧಿಕಾರಿಗಳ ಭರವಸೆಯೊಂದಿಗೆ ಅಂತ್ಯಗೊಳಿಸಲಾಗಿದ್ದು, ಎಳನೀರು ಕುಡಿಸುವ ಮೂಲಕ ಸತ್ಯಾಗ್ರಹವನ್ನ ಅಂತ್ಯಗೊಳಿಸಿದರು.
ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಧಾರವಾಡ ಜಿಲ್ಲಾ ಸಮಿತಿಯು, ಜಿಲ್ಲಾಧಿಕಾರಿ ಕಚೇರಿ ಮುಂದೆ 20 ದಿನಗಳಿಂದ ಹೋರಾಟ ನಡೆಸಿತ್ತು.
ಸರಕಾರದ ಆದೇಶದ ಅನ್ವಯ ಗುತ್ತಿಗೆ ಪೌರ ಕಾರ್ಮಿಕರಿಗೆ ನೇರ ನೇಮಕಾತಿ ಮಾಡಿಕೊಳ್ಳಬೇಕು ಮತ್ತು ವಾಹನ ಚಾಲಕರನ್ನ ಮರಳಿ ಕೆಲಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಹೋರಾಟ ನಡೆದಿತ್ತು. ಕಳೆದ 24 ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನ ನೇಮಕ ಮಾಡಿಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳು ಹೇಳಿದ ನಂತರ ಸತ್ಯಾಗ್ರಹವನ್ನ ಹಿಂದೆ ಪಡೆಯಲಾಗಿದೆ.
ಮಾಜಿ ಸಚಿವ ಹನಮಂತಪ್ಪ ಅಲ್ಕೋಡ, ವಿಜಯ ಗುಂಟ್ರಾಳ, ಎಂ.ವಿ.ವೆಂಕಟೇಶ, ನಾಗರಾಜ, ಗೀತಾ ವಡೇಕರ, ಬೇಬಿ ಮೇತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.