ಧಾರವಾಡದಲ್ಲಿ “ಕೃಪಾಪೋಷಿತ ಹೋರಾಟ”- ಹಂಗೆ ಬಂದು ಹಿಂಗೆ ಹೋದ ಕೋನರೆಡ್ಡಿ… !!!!

ಧಾರವಾಡ: ಜಿಲ್ಲೆಯಲ್ಲಿ ಒಂದೇ ಸಕ್ಕರೆ ಕಾರ್ಖಾನೆ ಇಲ್ಲದಿದ್ದರೂ ಹೋರಾಟ ನಡೆಸುತ್ತಿರುವ ಹಿನ್ನೆಲೆಗಳು ಒಂದೊಂದಾಗಿ ಹೊರಗೆ ಬರುತ್ತಿದ್ದು, ನಿಜವಾದ ರೈತರು ಕಬ್ಬು ಕಟಾವು ಮಾಡಿಸುವುದರಲ್ಲಿ ನಿರತರಾಗಿದ್ದಾರೆ.

ಹಳಿಯಾಳದ ಖಾಸಗಿ ಕಾರ್ಖಾನೆ ಕಾರ್ಯಾರಂಭ ಮಾಡಿದೆ. ಅಳ್ನಾವರ, ಹಳಿಯಾಳ ಭಾಗದಲ್ಲಿ ಕಬ್ಬು ಕಟಾವು ಆರಂಭಗೊಂಡಿದೆ. ಆದರೆ, ಹೋರಾಟಗಾರರು ಬೇರೆಯದ್ದೆ ಮಾತುಗಳನ್ನ ಹೇಳುತ್ತಿದ್ದಾರೆ.
ನವಲಗುಂದ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದು ನಂತರ ಹೀನಾಯವಾಗಿ ಸೋತು, ಮತ್ತೆಂದೂ ಜೆಡಿಎಸ್‌ನಿಂದ ಗೆಲ್ಲೋಕೆ ಆಗುವುದಿಲ್ಲವೆಂದುಕೊಂಡು ಕಾಂಗ್ರೆಸ್ ಪಕ್ಷ ಸೇರಿರುವ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿಯವರು ರೈತರೆಂದು ಹೇಳಿಕೊಂಡಿರುವವರು ನಡೆಸುತ್ತಿರುವ ಹೋರಾಟದಲ್ಲಿ ಭಾಗಿಯಾಗಿ ಬಂದಿದ್ದಾರೆ. ಸೋಜಿಗವೆಂದರೇ, ಸಣ್ಣಪುಟ್ಟ ವಿಷಯವನ್ನೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಕೋನರೆಡ್ಡಿಯವರು, ಇಲ್ಲಿ ಬಂದು ಹೋಗಿದ್ದರ ಬಗ್ಗೆ ಚಕಾರವೆತ್ತಿಲ್ಲ. ಹೀಗಾಗಿ ಹೋರಾಟ ರಾಜಕೀಯಕ್ಕಾಗಿ ನಡೆಯುತ್ತಿದೆ ಎಂಬ ಮಾತುಗಳು ಮತ್ತಷ್ಟು ಬಲಗೊಳ್ಳುತ್ತಿವೆ.
ಸರಕಾರದ ಜೊತೆಗೆ ಮಾತುಕತೆ ಮಾಡಿಕೊಂಡು ಬಗೆಹರಿಸಿಕೊಳ್ಳಬೇಕಾದ ವಿಷಯವನ್ನ ತಮಗೆ ಬೇಕಾದವರ ರಾಜಕಾರಣಕ್ಕೆ ಉಪಯೋಗ ಮಾಡಲು ಕುರುಬೂರು ಶಾಂತಕುಮಾರ ಮುಂದಾಗುವ ಮೂಲಕ, ಒಂದೇ ಒಂದು ಪ್ಯಾಕ್ಟರಿಯಿಲ್ಲದ ಊರಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.