Posts Slider

Karnataka Voice

Latest Kannada News

ಧಾರವಾಡ-71 ಕ್ಷೇತ್ರವನ್ನ “GPA” ಹೋಲ್ಡರ್‌ ನಡೀಸ್ತಿದ್ದಾರೆ- ಮಾಜಿ ಶಾಸಕ ಅಮೃತ ದೇಸಾಯಿ ವ್ಯಂಗ್ಯ…

1 min read
Spread the love

ಧಾರವಾಡ: ಧಾರವಾಡ-71 ಕ್ಷೇತ್ರವನ್ನ ಜಿಪಿಓ ಹೋಲ್ಡರ್‌ ನಡೀಸಿಕೊಂಡು ಹೋಗುತ್ತಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲವೆಂದು ಮಾಜಿ ಶಾಸಕ ಅಮೃತ ದೇಸಾಯಿ ವ್ಯಂಗ್ಯವಾಡಿದರು.
ಬರಗಾಲ ಬಿದ್ದರೂ ರಾಜ್ಯ ಸರಕಾರ ಯಾವುದೇ ಘೋಷಣೆ ಮಾಡುತ್ತಿಲ್ಲವೆಂದು ಆರೋಪಿಸಿ, ಭಾರತೀಯ ಜನತಾ ಪಕ್ಷ ನಡೆಸುತ್ತಿದ್ದ ಹೋರಾಟದ ವೇಳೆಯಲ್ಲಿ ಮಾಜಿ ಶಾಸಕರು ಮಾತನಾಡುತ್ತಿದ್ದರು.
ಧಾರವಾಡದ ಕಲಾಭವನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಪ್ರತಿಭಟನಾ ನಿರತರು, ರಾಜ್ಯ ಸರಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.

ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಶಂಕರ ಕೋಮಾರದೇಸಾಯಿ, ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಗಂಗಾಧರ ಪಾಟೀಲಕುಲಕರ್ಣಿ, ಶಿವಪ್ಪ ಬೆಳಾರದ, ಬಸವರಾಜ ಗುರಿಕಾರ ಸೇರಿದಂತೆ ನೂರಾರೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬೇಡಿಕೆಗಳು ಇಲ್ಲಿವೆ…

* ಕೆಲವು ಕಡೆ ಮುಂಗಾರು ಬಿತ್ತನೆ ಆಗಿದ್ದು ಈಗ ಮಳೆ ಇಲ್ಲದೆ ಬೆಳೆ ಒಣಗುವ ಸ್ಥಿತಿಗೆ ಬಂದಿರುತ್ತದೆ. ಆದ ಕಾರಣ ಧಾರವಾಡ ತಾಲೂಕ ಬರಪೀಡಿತ ತಾಲೂಕಂದು ಘೋಷಿಸಿ ಪ್ರತಿ ಎಕರೆಗೆ ರೂ: 20000/- ಪರಿಹಾರ ಹಣ ಮಂಜೂರ ಮಾಡಬೇಕು.

* ಅಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿದ್ದು ಅನಧಿಕೃತ ಲೋಡ್‌ಶೆಡ್ಡಿಂಗ್‌ನಿಂದ ಜಮೀನಿಗೆ ನೀರು ಹಾಯಿಸಲು ತೊಂದರೆಯಾಗುತ್ತಿದೆ. ಅದರಂತೆ ಗ್ರಾಮಗಳಲ್ಲಿರುವಂತಹ ಗಿರಣಿ, ಹೊಟೇಲ, ವೆಲ್ಡಿಂಗ್ ಶಾಫಗಳ ವಿದ್ಯುತ್ ಬಿಲ್ಲು ಏರಿಕೆಯಾಗಿದ್ದು ಇದರಿಂದ ಗ್ರಾಮಗಳ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಆದ್ದರಿಂದ ಏರಿಕೆಯಾದ ವಿದ್ಯುತ್ ದರವನ್ನು ಕಡಿಮೆ ಮಾಡಿ ಪುನಃ ಮೊದಲಿನಂತೆ ವಿದ್ಯುತ್ ಬಿಲ್ ಆಕರಣೆ ಮಾಡುವಂತಾಗಬೇಕು.

* ಅದರಂತೆ ಈಗಿನ ರಾಜ್ಯ ಸರ್ಕಾರ ಬರತಕ್ಕಂತಹ ಕಿಸಾನ ಸಮ್ಮಾನ ಯೋಜನೆ ನಿಲ್ಲಿಸಿದ್ದು ಖೇದಕರ ಸಂಗತಿಯಾಗಿರುತ್ತದೆ. ಅದನ್ನು ಮನಃ ಪ್ರಾರಂಭಿಸಿ ರೈತರ ಖಾತೆಗಳಿಗೆ ವಾರ್ಷಿಕವಾಗಿ ರೂ: 4000-00 ಹಣ ಹಾಕಬೇಕು.

* ರೈತ ವಿದ್ಯಾ ನಿಧಿ ಈ ಹಿಂದಿನ ಸರ್ಕಾರ ಯೋಜನೆ ರೂಪಿಸಿ ರೈತರ ಶಾಲಾ ಮಕ್ಕಳಿಗೆ ಅನುಕೂಲವಾಗುವ ಸಲುವಾಗಿ ಸ್ಥಾಲರಶಿಫ್ ನೀಡುತ್ತಿದ್ದರು ಆದರೆ ಇಂದಿನ ಸರ್ಕಾರ ಅದನ್ನು ನಿಲ್ಲಿಸಿದ್ದು ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದ್ದು ಕಾರಣ ಯೋಜನೆಯನ್ನು ಪುನಾರಾರಂಭಿಸಬೇಕು.ರೈತರಿಗೆ ಈ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಎ.ಪಿ.ಎಂ.ಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದರಿಂದ ನಿಗದಿತ ಬೆಲೆ ಸಿಗುತ್ತಿಲ್ಲ. ಆದ್ದರಿಂದ ಮುಕ್ತ ಮಾರುಕಟ್ಟೆಯಿಂದ ರೈತ ಬೇರೆ ಎ.ಪಿ.ಎಂ.ಸಿ ಗಳಿಗೆ ಹೋಗಿ ಮಾರಾಟ ಮಾಡಬಹುದು ಆದ್ದರಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗುವ ತಿದ್ದುಪಡಿಯಾದ ಎ.ಪಿ.ಎಂ.ಸಿ ಕಾಯ್ದೆಯನ್ನು ಮರಳಿ ತರಬೇಕು. *

* ಬೆಲೆ ಏರಿಕೆ, ಎಲ್ಲ ದಿನಸಿ ವಸ್ತುಗಳು ಮತ್ತು ಖಾದ್ಯತೈಲಗಳ ಬೆಲೆ ಗಗನಕ್ಕೆ ಹೋಗಿರುವುದರಿಂದ ಜನಸಾಮಾನ್ಯರು ತತ್ತರಿಸಿ ಹೋಗಿರುತ್ತಾರೆ. ತಕ್ಷಣದಿಂದ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು.

* ಇತ್ತೀಚಿನ ದಿನಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಮನೆಗಳು ಬಿದ್ದು ಅದರಲ್ಲಿರುವ ಜನಸಾಮಾನ್ಯರಿಗೆ ವಸತಿಗೆ ತೊಂದರೆಯಾಗಿರುತ್ತದೆ ಪ್ರತಿ ಬಿದ್ದ ಮನೆಗೆ ಕೂಡಲೆ ಪೂರ್ಣ ಪ್ರಮಾಣದಲ್ಲಿ ಬಿದ್ದ ಮನೆಗೆ 5 ಲಕ್ಷ ರೂಪಾಯಿಗಳು ಮತ್ತು ಅಪೂರ್ಣ’ ಬಿದ್ದ ಮನೆಗೆ 3 ಲಕ್ಷ ರೂಪಾಯಿಗಳನ್ನು ಹಾಗೂ ಸ್ವಲ್ಪ ಪ್ರಮಾಣ ಹಾನಿಯದ 50 ಸಾವಿರ ರೂಪಾಯಿಗಳನ್ನು ತ್ವರಿತಗತಿಯಲ್ಲಿ ಹಣ ಮಂಜೂರ ಮನೆಗಳಿಗೆ ಮಾಡಬೇಕು.

* ಶಕ್ತಿ ಯೋಜನೆಯಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದು ಬಸ್ಸುಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಇಲ್ಲವೆಂದಾದರೆ ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಿ.

*ಈ ಸರ್ಕಾರ ಪ್ರಾರಂಭಿಸಲು ಪ್ರಯತ್ನಪಡುತ್ತಿರುವ 5ನೇ ಗ್ಯಾರಂಟಿ ಯೋಜನೆಯಾದ ಯುವನಿಲ್ಲ ಈ ಯೋಜನೆ, ಐದಾರು ವರ್ಷಗಳ ಹಿಂದೆ ಕಲಿತು

ನಿರುದ್ಯೋಗಿಯಾಗಿರುವ ಪದವಿ ಮುಗಿಸಿರುವಂತಹ, ಕೈಗಾರಿಕಾ ತರಬೇತಿ (ITI) ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೂ ಸಹ ಯುವನಿಧಿ ಯುವನಿಧಿ ಯೋಜನೆ ಅನ್ವಯಿಸುವಂತಾಗಬೇಕು.


Spread the love

Leave a Reply

Your email address will not be published. Required fields are marked *