ನೌಕರಿಗಾಗಿ ರಕ್ತ ಕೊಟ್ಟರೂ… ಐಸಿಯುಗೆ ದಾಖಲಾದರೂ… ಕರಗದ “ದಪ್ಪ ಚರ್ಮದ” ಆಡಳಿತ…
1 min readಧಾರವಾಡ: ಸರಕಾರ ಬಡವರ ಬದುಕನ್ನ ಹಸನು ಮಾಡಬೇಕೆಂಬ ಕನಸು ಕಾಣಬೇಕೆ ಹೊರತೂ, ಅದು ನನಸಾಗೋದು ಸಾಧ್ಯವಿಲ್ಲ ಎನ್ನುವುದಕ್ಕೆ ವಿದ್ಯಾನಗರಿಯಲ್ಲಿ ನಡೆಯುತ್ತಿರುವ ಹೋರಾಟವೊಂದು ಕ್ಷಣ ಕ್ಷಣಕ್ಕೂ ಸಾಕ್ಷ್ಯ ನುಡಿಯುತ್ತಿದೆ.
ಹೌದು.. ಅವಳಿನಗರದಲ್ಲಿ ನೀರು ಸರಬರಾಜು ಸಮಸ್ಯೆಯಾಗುತ್ತಿರುವುದಕ್ಕೆ ಮೂಲ ಕಾರಣವಾಗಿದ್ದು ಎಲ್ ಆ್ಯಂಡ್ ಟಿ ಕಂಪನಿಯ ಧೋರಣೆ. ನೌಕರಿ ಕಳೆದುಕೊಂಡು ಪಾಲಿಕೆ ಎದುರು ನಿರಂತರ ಹೋರಾಟ ನಡೆಯುತ್ತಿದೆ. ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಹಾಗೂ ನಾಗರಾಜ ಕಿರಣಗಿ ಐಸಿಯು ಸೇರುವಂತಾಗಿದೆ.
ಹೋರಾಟದಿಂದ ನ್ಯಾಯ ಪಡೆಯಬೇಕೆಂಬ ಗಾಂಧಿ ತತ್ವ ಅನುಸರಿಸುತ್ತಿರುವ ಬಡವರ ಮಕ್ಕಳು, ರಕ್ತದಿಂದ ಪತ್ರ ಬರೆಯಲು ಆರಂಭಿಸಿದ್ದಾರೆ. ಆದರೂ, ಸರಕಾರದ ಕಣ್ಣು ಮಾತ್ರ ತೆಗೆಯುತ್ತಿಲ್ಲ.
ಬಡವರನ್ನ ಬೀದಿಗೆ ತಳ್ಳಿ ‘ನೀಚ ಖುಷಿ’ ಅನುಭವಿಸುತ್ತಿರುವ ಆತ್ಮಗಳು ಇನ್ನೂ ಮುಂದಾದರೂ ಬಡವರಿಗೆ ನೌಕರಿ ಕೊಟ್ಟು ಜೀವನಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಪ್ರಜ್ಞಾವಂತರ ಕೂಗಾದರೂ ‘ದಪ್ಪ ಚರ್ಮದ’ ಅಧಿಕಾರಸ್ಥರಿಗೆ ಕೇಳಬೇಕಿದೆ.