ಧಾರವಾಡದಲ್ಲಿ ವಿಕಲಚೇತನರಿಂದ ಬೇಡಿಕೆ ಈಡೀರಿಕೆಗಾಗಿ ಪ್ರತಿಭಟನೆ..!
1 min readಧಾರವಾಡ: ತಮ್ಮ ಹಲವು ಬೇಡಿಕೆಗಳನ್ನ ರಾಜ್ಯ ಸರಕಾರ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ವಿಕಲಚೇತನದ ಹಾಗೂ ವಿವಿದೋದ್ದೇಶ ಮತ್ತು ಗ್ರಾಮೀಣ ಪನರ್ವಸತಿ ಕಾರ್ಯಕರ್ತರ ಒಕ್ಕೂಟ ಧಾರವಾಡದಲ್ಲಿಂದು ಪ್ರತಿಭಟನೆ ನಡೆಸಿತು.
ಪ್ರತಿಭಟನೆಯ ವೀಡಿಯೋ ಇಲ್ಲಿದೆ ನೋಡಿ…
ಧಾರವಾಡ ಕೋರ್ಟ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದ ವಿಕಲಚೇತನರು, ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.
ವಿವಿದೋದ್ದೇಶ ಗ್ರಾಮೀಣ ಮತ್ತು ನಗರ ಪನರ್ವಸತಿ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಅಧಿನಿಯಮ ಜಾರಿಗೊಳಿಸಿ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್ ಡಬ್ಲೂ ಅವರನ್ನ ತಾಲೂಕ ಅಂಗವಿಕಲ ಅಧಿಕಾರಿಯನ್ನಾಗಿ ವಿಆರ್ ಡಬ್ಲೂ ಅವರನ್ನ ಗ್ರಾಮ ಮಟ್ಟದ ಅಭಿವೃದ್ಧಿ ಸಹಾಯಕರನ್ನಾಗಿ ಹಾಗೂ ಯುಆರ್ ಡಬ್ಲೂ ರವರನ್ನ ನಗರ ವಿಕಲಚೇತನರ ಅಭಿವೃದ್ಧಿ ಸಹಾಯಕರನ್ನಾಗಿ ಹುದ್ದೆಗಳನ್ನ ಸೃಷ್ಟಿಸಿ ಖಾಯಂಗೊಳಿಸಬೇಕೆಂದು ಆಗ್ರಹಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಬೆಳಾರದ, ರಾಜ್ಯ ನಿರ್ದೇಶಕ ರವೀಂದ್ರ ಹುಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಸರೋಜ ಮಾವಿನಕಾಯಿ, ಜಿಲ್ಲಾ ಕಾರ್ಯದರ್ಶಿ ಶಿದ್ದನಗೌಡ ಜೀವನಗೌಡ್ರ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.