ಧಾರವಾಡ ಜಿಲ್ಲಾ “ಪೊಲೀಸ್ ಪವರ್”- ಹೈದ್ರಾಬಾದ್‌ನಲ್ಲಿ 23ಕೋಟಿ ವಂಚಿಸಿದ್ದ “ದಂಪತಿ” ಅರೆಸ್ಟ್…!!!
ಧಾರವಾಡ: ಮುತ್ತಿನನಗರಿ ಹೈದರಾಬಾದ್‌ನಲ್ಲಿ 23 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಲೆಮರಸಿಕೊಂಡಿದ್ದ ದಂಪತಿಗಳನ್ನ ಹುಬ್ಬಳ್ಳಿ ಧಾರವಾಡ ಬೈಪಾಸ್‌ನಲ್ಲಿ ಬಂಧಿಸಿರುವ ಧಾರವಾಡ ಜಿಲ್ಲಾ ಗ್ರಾಮೀಣ ಠಾಣೆ ಪೊಲೀಸರು, ಅತೀವ ಪ್ರಶಂಸೆಗೆ ಪಾತ್ರರಾಗಿದ್ದಾರೆ
ಹೈದರಾಬಾದ್‌ನಲ್ಲಿನ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ದಂಪತಿಗಳಾದ ಸತೀಶ ಉಪ್ಪಲಪತಿ ಮತ್ತು ಶಿಲ್ಪಾ ಬಂಡಾ ಎಂಬುವವರು 23 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಲುಕಿ ತಲೆಮರೆಸಿಕೊಂಡಿದ್ದರು.
ದಂಪತಿ ಮೇಲೆ ಹೈದರಾಬಾದ್ ಸೆಂಟ್ರಲ್ ಕ್ರೈಂ ಸ್ಟೇಷನ್‌ನಲ್ಲಿ ಹಲವು ದೂರುಗಳು ದಾಖಲಾಗಿದ್ದವು. ಪೊಲೀಸರ ಕೈಗೆ ಸಿಗದೇ ಬೇರೆ ಬೇರೆ ರಾಜ್ಯಗಳಿಗೆ ಸುತ್ತಾಡುತ್ತಿದ್ದ ದಂಪತಿಗಳ ಕುರಿತು ಖಚಿತ ಮಾಹಿತಿ ಸಿಕ್ಕಿದೆ.
ಎಸ್‌ಪಿ ಗುಂಜನ್ ಆರ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಬೈಪಾಸ್‌ನಲ್ಲಿ ಚೆಕ್ ಪೋಸ್ಟ್ ಮಾಡಿ ಸೆರೆ ಹಿಡಿದು, ಹೈದ್ರಾಬಾದ್ ಸೆಂಟ್ರಲ್ ಕ್ರೈಮ್ ಸ್ಟೇಶನ್‌ಗೆ ಪೊಲೀಸರಿಗೆ ಒಪ್ಪಿಸಲಾಗಿದೆ.
