ಮಳೆಯಲ್ಲೂ ಸಮಯಪ್ರಜ್ಞೆ ಮರೆದ ಧಾರವಾಡ ಸಂಚಾರಿ ಠಾಣೆ ಪೊಲೀಸರು…!

ಧಾರವಾಡ: ನಗರದ ಮಹಾನಗರ ಪಾಲಿಕೆಯ ಕಚೇರಿ ಬಳಿಯಲ್ಲಿ ಮರಗಳಿಂದ ಬಿದ್ದ ಎಲೆ-ಕಾಯಿಯಿಂದ ಬೈಕ್ ಸವಾರರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸ್ವತಃ ಧಾರವಾಡದ ಸಂಚಾರಿ ಠಾಣೆ ಪೊಲೀಸರು, ಟ್ರ್ಯಾಕ್ಟರ್ ಮೂಲಕ ರಸ್ತೆಗೆ ಮತ್ತಷ್ಟು ನೀರನ್ನ ಬಿಟ್ಟು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಘಟನೆ ನಡೆದಿದೆ.

ಮಹಾನಗರ ಪಾಲಿಕೆ ಕಚೇರಿಯ ಪಕ್ಕದಲ್ಲಿರುವ ಮರಗಳಿಂದ ಎಲೆ ಹಾಗೂ ಜಾಜಿ ಕಾಯಿಗಳು ರಸ್ತೆಯಲ್ಲಿ ಬಿದ್ದ ಪರಿಣಾಮ, ಹತ್ತಕ್ಕೂ ಹೆಚ್ಚು ಬೈಕ್ ಸವಾರರು ಸ್ಕೀಡ್ ಆಗಿ ಕೆಳಗೆ ಬಿದ್ದಿದ್ದಾರೆ. ಇದರಿಂದ ಹಲವರು ಗಾಯಗೊಂಡಿದ್ದು, ಅನೇಕ ವಾಹನಗಳು ಜಖಂಗೊಂಡಿವೆ.

ಈ ವಿಷಯ ಗೊತ್ತಾದ ತಕ್ಷಣವೇ ಧಾರವಾಡ ಸಂಚಾರಿ ಠಾಣೆಯ ಎಂ.ವೈ.ಬಾಬಜಿ, ಡಿ.ವಿ.ಗಾಳರೆಡ್ಡಿ, ಐ.ಜಿ.ಕವಳಿ ಹಾಗೂ ಎಲ್.ಎಲ್.ನಾಯಕ ಅವರುಗಳು ಸೇರಿಕೊಂಡು, ರಸ್ತೆಗೆ ಟ್ರ್ಯಾಕ್ಟರನಿಂದ ನೀರು ಬಿಟ್ಟು ಸ್ವಚ್ಚಗೊಳಿಸಿದರು.
ಪೊಲೀಸರ ಸಮಯಪ್ರಜ್ಞೆಯಿಂದ ಬೈಕ್ ಸವಾರರು ಸುಗಮವಾಗಿ ಸಂಚಾರ ನಡೆಸುತ್ತಿದ್ದು, ಹಲವು ಬೈಕ್ ಸವಾರರು ಪೊಲೀಸರಿಗೆ ಧನ್ಯವಾದ ತಿಳಿಸಿದರು. ರಾತ್ರಿಯ ಸಮಯದಲ್ಲೂ ಜನರ ಉತ್ತಮ ಸಂಚಾರಕ್ಕೆ ಶ್ರಮಿಸುತ್ತಿರುವ ಪೊಲೀಸರಿಗೆ ಕರ್ನಾಟಕವಾಯ್ಸ್.ಕಾಂ ಕೂಡಾ ಧನ್ಯವಾದ ಸಲ್ಲಿಸುತ್ತದೆ.