Posts Slider

Karnataka Voice

Latest Kannada News

ಧಾರವಾಡದ “ಪೊಲೀಸ್ ಚೌಕಿ” ಉದ್ಘಾಟನೆ ವೇಳೆಯಲ್ಲೂ “IPS” ಸರಳತೆ…!!!

1 min read
Spread the love

ಧಾರವಾಡ: ಸಾರ್ವಜನಿಕರ ಸಹಕಾರದೊಂದಿಗೆ ಧಾರವಾಡದ ಭೂಸಪ್ಪ ಚೌಕ್‌ನಲ್ಲಿ ನವೀಕರಣಗೊಂಡ ಪೊಲೀಸ್ ಚೌಕಿಯನ್ನ ಪೊಲೀಸ್ ಕಮೀಷನರ್ ಉದ್ಘಾಟನೆ ಮಾಡುವ ಸಮಯದಲ್ಲಿ ಸರಳತೆ ಮೆರೆದ ಪ್ರಸಂಗ ನಡೆದಿದೆ.

ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…

ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಸ್ವಾತಂತ್ಯೋತ್ಸವದ ಸಮಯದಲ್ಲಿ ನಡೆದ ಉದ್ಘಾಟನೆಯನ್ನ ಮಕ್ಕಳಿಂದ ಮಾಡಿಸುವ ಮೂಲಕ ಸರಳತೆ ಮೆರೆದರಲ್ಲದೇ, ಅವರೊಂದಿಗೆ ಕೆಲ ಕ್ಷಣಗಳನ್ನ ಕಳೆದರು.

ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರ್ ನಾಗೇಶ ಕಾಡದೇವರಮಠ, ಎಎಸ್ಐ ಕುರಿ, ರೊಳ್ಳಿ ಹಾಗೂ ಬಸಯ್ಯ ಹಿರೇಮಠ ಅವರನ್ನ ಸತ್ಕರಿಸಲಾಯಿತು.

ಪಾಳು ಬಿದ್ದಿದ್ದ ಚೌಕಿಯನ್ನ ಜನರ ಸಹಾಯದಿಂದ ನಿರ್ಮಾಣ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅವಳಿನಗರದಲ್ಲಿ ಚೆಂದನೆಯ ಕಟ್ಟಡವೂ ಇದಾಗಿದೆ.


Spread the love

Leave a Reply

Your email address will not be published. Required fields are marked *