ಧಾರವಾಡ: ನಾಲ್ಕು ದಿಕ್ಕಿನಿಂದ “ತ್ರಿಮೂರ್ತಿ ಇನ್ಸಪೆಕ್ಟರ್”ಗಳ ದಾಳಿ- ಪತರುಗುಟ್ಟಿದ “ರೌಡಿಗಳು”….

ಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ಇಂದು ಬೆಳ್ಳಂಬೆಳಿಗ್ಗೆ ರೌಡಿಗಳ ನಿದ್ದೆ ಹಾಳಾಗಿತ್ತು, ಅವರೇಳುವ ಮುನ್ನವೇ ಬಾಗಿಲು ಬಡಿದು, ಎಚ್ಚರಿಸುವ ಜೊತೆಗೆ ಎಚ್ಚರಿಕೆಯನ್ನ ಮೂರು ಠಾಣೆಯ ಪೊಲೀಸರು ಮಾಡಿದ್ದಾರೆ.
ಧಾರವಾಡ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ, ಶಹರ ಠಾಣೆಯ ವಿಶ್ವನಾಥ ಚೌಗಲೆ ಹಾಗೂ ಉಪನಗರ ಠಾಣೆಯ ದಯಾನಂದ ಶೇಗುಣಿಸಿ ಅವರುಗಳು ತಮ್ಮ ವ್ಯಾಪ್ತಿಯ ರೌಡಿಗಳಿಗೆ ಎಚ್ಚರಿಕೆಯನ್ನ ನೀಡಿದ್ದಾರೆ.
ಎಸಿಪಿ ಬಿ.ಬಸವರಾಜ ಅವರ ಸೂಚನೆಯ ಆಧಾರದ ಮೇಲೆ ಸಂಘಟಿತವಾಗಿ ದಾಳಿ ಮಾಡಿದ ಪೊಲೀಸರು, ಅಹಿತಕರ ಘಟನೆಗಳು ನಡೆದರೇ, ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಹುಬ್ಬಳ್ಳಿಯಲ್ಲಿ ಎರಡು ಭೀಕರ ಕೊಲೆಗಳು ನಡೆದ ನಂತರ ಪೊಲೀಸರು ಸಾಕಷ್ಟು ಜಾಗೃತೆ ವಹಿಸುತ್ತಿದ್ದು, ಸಾರ್ವಜನಿಕರು ಭಯ ಬೀಳದಂತ ಸ್ಥಿತಿಯನ್ನ ನಿರ್ಮಾಣ ಮಾಡುತ್ತಿದ್ದಾರೆ. ಜನತೆ ಕೂಡಾ ಪೊಲೀಸರಿಗೆ ಸಹಾಯ ಮಾಡುವ ಜೊತೆಗೆ, ಅಹಿತಕರ ಘಟನೆಗಳು ನಡೆಯಬಹುದೆಂಬ ಸೂಚನೆ ಸಿಕ್ಕರೂ ಪೊಲೀಸರಿಗೆ ತಕ್ಷಣ ತಿಳಿಸುವ ಅವಶ್ಯಕತೆಯಿದೆ.