ಕಟ್ಟಡವೇರಿ “ತಂದೆ-ತಾಯಿ” ಕರೆಸೆಂದು ಆರೋಪಿಯ ಹಠ- ಧಾರವಾಡದಲ್ಲಿ ನಡೆದ ‘ಹೈ ಡ್ರಾಮಾ’….

ಧಾರವಾಡ: ಬಂಧಿತ ಆರೋಪಿ ನ್ಯಾಯಕ್ಕಾಗಿ ಕಟ್ಟಡ ಏರಿ ಕುಳಿತು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ ಘಟನೆ ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿಯ ಖಾಸಗಿ ಕಟ್ಟಡದಲ್ಲಿ ನಡೆದಿದೆ.
ಅಣ್ಣಿಗೇರಿ ಮೂಲದ ವಿಜಯ ಉಣಕಲ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಕಟ್ಟಡ ಏರಿ ಕುಳಿತು ನನಗೆ ನ್ಯಾಯ ಒದಗಿಸಿ ಎಂದು ಜನರ ಮುಂದೆ ಗೋಗರೆದಿದ್ದಾನೆ.
ವೀಡಿಯೋ…
ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿ ಎಷ್ಟೇ ಮನವೊಲಿಸಿದರೂ ಒಪ್ಪದ ವ್ಯಕ್ತಿ. ನನ್ನನು ಪೊಲೀಸರು ಹಿಂಸೆ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಬರುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.
ನಂತರ ಸ್ಥಳೀಯರು, ಮಾಧ್ಯಮದ ಸಿಬ್ಬಂದಿ ಹಾಗೂ ಪೊಲೀಸರು ಆರೋಪಿಯ ಮನವೊಲಿಸಿ ನ್ಯಾಯ ಒದಗಿಸುವ ಭರವಸೆ ನೀಡಿ ಆರೋಪಿಯನ್ನು ಕೆಳಗೆ ಇಳಿಸಿದ್ದಾರೆ. ಆರೋಪಿ ವಿಜಯ ನನ್ನ ಅಮ್ಮನನ್ನು ನೋಡಬೇಕು. ಪೊಲೀಸರು ಹೊಡೆಯುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾನೆ.