Posts Slider

Karnataka Voice

Latest Kannada News

ಧಾರವಾಡದಲ್ಲಿ ಸ್ವಾತಿ ಪೋಟೊ ಸ್ಟುಡಿಯೋ ಕಳ್ಳತನ: ಲಕ್ಷಾಂತರ ಮೌಲ್ಯದ ಕ್ಯಾಮರಾ ನಾಪತ್ತೆ…!

Spread the love

ಧಾರವಾಡ: ನಗರದ ಮಾಳಮಡ್ಡಿಯ ಮಂಜುನಾಥಪುರದಲ್ಲಿ ಲಾಕ್ ಡೌನ್ ಸಮಯದಲ್ಲೇ ಕಳ್ಳತನ ಮಾಡಿ ಪರಾರಿಯಾಗಿರುವ ಕಳ್ಳರು, ಲಕ್ಷಾಂತರ ಮೌಲ್ಯದ ಕ್ಯಾಮರಾಗಳನ್ನ ದೋಚಿಕೊಂಡು ಹೋಗಿದ್ದಾರೆ.

ರಾಹುಲ ಮಾಲಿಕತ್ವದ ಸ್ವಾತಿ ಪೋಟೊ ಸ್ಟುಡಿಯೋದಲ್ಲಿಯೇ ಕಳ್ಳತನ ನಡೆದಿದ್ದು, ಸುಮಾರು ಆರು ಲಕ್ಷ ರೂಪಾಯಿ ಮೌಲ್ಯದ ಮೂರು ಕ್ಯಾಮರಾಗಳನ್ನ ಕಳ್ಳತನ ಮಾಡಿಕೊಂಡು ಹೋಗಲಾಗಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಟುಡಿಯೋದಲ್ಲಿ ಕೆಲಸವಿಲ್ಲದಿರುವ ಕಾರಣ, ಎಲ್ಲವನ್ನೂ ಅಲ್ಲಿಯೇ ಇಟ್ಟು ಹೋದ ಸಮಯದಲ್ಲಿ ಘಟನೆ ನಡೆದಿದ್ದು, ಇಂದು ಬೆಳಿಗ್ಗೆ ನೋಡಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಚಿತ್ರ ನಿರ್ದೇಶಕರು ಆಗಿರುವ ರಾಹುಲ ಅವರು ಸ್ಟುಡಿಯೋ ನಂಬಿಯೇ ಜೀವನ ನಡೆಸುತ್ತಿದ್ದರು. ಅಂತಹದರಲ್ಲಿ ಬದುಕಿಗೆ ಅವಶ್ಯವಿರುವ ಕ್ಯಾಮರಾಗಳೇ ಇಲ್ಲವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ವಿದ್ಯಾಗಿರಿ ಠಾಣೆಯ ಪೊಲೀಸರಿಗೆ ಮಾಹಿತಿಯನ್ನ ನೀಡಲಾಗಿದ್ದು, ಪೊಲೀಸರು ಪರಿಶೀಲನೆಯನ್ನ ನಡೆಸಿ ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *