ಧಾರವಾಡದ ಪೆಟ್ರೋಲ್ ಬಂಕ್‌ನಲ್ಲಿ “ಮಹಾಮೋಸ” ಬಹಿರಂಗ- ಹಾಡುಹಗಲೇ ನಡೆಯುತ್ತಿದೆ ಲಕ್ಷ ಲಕ್ಷ ಲೂಟಿ: Exclusive Video..

ಧಾರವಾಡ: ನೀವು ನಿಮ್ಮ ಜೀವಮಾನದಲ್ಲಿಯೇ ಇಂತಹ ಮೋಸವನ್ನ ಕೇಳಿರಲೂ ಸಾಧ್ಯವಿಲ್ಲ. ಅಂಥಹದ್ದರಲ್ಲಿ ನೋಡಿರಲೂ ಆಗಿರುವುದೇ ಇಲ್ಲ ಬಿಡಿ. ಹಾಗಾದ್ರೇ ಇಲ್ಲಿನ ವೀಡೀಯೋವನ್ನ ಸಮಯ ತೆಗೆದುಕೊಂಡು ಸಂಪೂರ್ಣವಾಗಿ ನೋಡಿ… ಅರ್ಧ ನೋಡಿದರೇ ಮೋಸದ ಪರಿ ನಿಮಗೆ ಅರ್ಥವಾಗೋದಿಲ್ಲ…
ಎಕ್ಸಕ್ಲೂಸಿವ್ ವೀಡಿಯೋ….
ಧಾರವಾಡದ ಪೆಟ್ರೋಲ್ ಬಂಕ್‌ವೊಂದರ ಮಾಲೀಕ ಪದೇ ಪದೇ ಕಡಿಮೆ ಬರುತ್ತಿರುವ ಪೆಟ್ರೋಲ್, ಡಿಸೇಲ್‌ನ್ನ ಬಗ್ಗೆ ತಲೆ ಕೆಡಿಸಿಕೊಂಡಾಗ ಈ ಸತ್ಯ ಬಹಿರಂಗಗೊಂಡಿದೆ.
ಕೊಟ್ನಿಸ್ ಟ್ರಾನ್ಸಪೋರ್ಟ್‌ನವರು ಬಂಕ್‌ಗಳಿಗೆ ಉತ್ಪನ್ನಗಳನ್ನ ಟ್ಯಾಂಕರ್‌ಗಳ ಮೂಲಕ ಬಿಡುತ್ತಿದ್ದಾರೆ. ಒಂದು ಟ್ಯಾಂಕರ್‌ನಲ್ಲಿ 600 ಲೀಟರ್ ಕಡಿಮೆ ಬರತೊಡಗಿದೆ. ಈ ಬಗ್ಗೆ ಕರ್ನಾಟಕವಾಯ್ಸ್.ಕಾಂ ಈ ಭಾಗದ ಸೇಲ್ಸ್ ಅಧಿಕಾರಿ ರಾಜೇಶ ಅವರನ್ನ ಸಂಪರ್ಕಿಸಲು ಸತತ ಪ್ರಯತ್ನ ಮಾಡಿದರೂ ಕಾಲ್ ರಿಸೀವ್ ಮಾಡಲೇ ಇಲ್ಲ.
ಈ ಘಟನೆ ಬೆಳಕಿಗೆ ಬರುತ್ತಿದ್ದ ಹಾಗೇ ಹಲವು ಅನುಮಾನಗಳು ಮೂಡತೊಡಗಿವೆ. ಟ್ರಾನ್ಸಪೋರ್ಟ್ ಕಂಪನಿಯ ಜೊತೆಗೆ ಬಿಪಿಸಿಎಲ್‌ನ ಸೇಲ್ಸ್ ಅಧಿಕಾರಿಗಳು ಶಾಮೀಲಾಗಿ ಹೀಗೆ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.
ಮೋಸದ ಬಗ್ಗೆ ಇಂದು ಪೆಟ್ರೋಲ್ ಬಂಕ್ ಮಾಲೀಕರು ಹಿರಿಯ ಪೊಲೀಸ್ ಅಧಿಕಾರಿಗಳನ್ನ ಭೇಟಿಯಾಗಿ, ಇದಕ್ಕೆ ತಾರ್ಕಿಕ ಅಂತ್ಯ ಮಾಡಬೇಕೆಂದು ಒತ್ತಾಯಿಸುವ ಸಾಧ್ಯತೆಯಿದೆ.
ದಕ್ಷ ಪೊಲೀಸ್ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಕೂಡಾ ಈ ಬಗ್ಗೆ ಗಮನ ನೀಡಬೇಕಿದೆ. ಇಲ್ಲಿಯೂ ಕೂಡಾ ಹಗಲು ದರೋಡೆ ನಡೆಯುತ್ತಿದೆ.