ಸಮಾಜದ ಹೆಸರಿನಲ್ಲಿ “ಕುತಂತ್ರ”- ಬೀದಿಯಲ್ಲಿ ಬಡೆಯದೇ ಪೊಲೀಸರಿಗೆ ಒಪ್ಪಿಸಿ
1 min readಪಂಚಮಸಾಲಿ ವೀರಶೈವ ಸಮಾಜದ ಹೆಸರಿನಲ್ಲಿ ನಕಲಿ ಕರಪತ್ರ- ಪೊಲೀಸರಿಗೆ ಒಪ್ಪಿಸಲು ಕರೆ
ಧಾರವಾಡ: ಸಮಾಜದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೂಡಿಕೊಂಡು ಪಂಚಮಸಾಲಿ ವೀರಶೈವ ಸಮಾಜದ ಹೆಸರಿನಲ್ಲಿ ರಿಜಿಸ್ಟರ್ ಇಲ್ಲದ ಸಂಘದ ಹೆಸರಿನಲ್ಲಿ ಜನರನ್ನ ದಾರಿ ತಪ್ಪಿಸಲು ಮುಂದಾಗಿದ್ದು, ಸಮಾಜದ ಜನರು ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಜಾಗರೂಕರಾಗಿರಬೇಕೆಂದು ಬಿಜೆಪಿ ಪ್ರಮುಖರಾದ ಶರಣಪ್ಪಗೌಡ ದಾನಪ್ಪಗೌಡ್ರ ಹಾಗೂ ಈರಣ್ಣ ಜಡಿ ಮನವಿ ಮಾಡಿಕೊಂಡಿದ್ದಾರೆ.
ಸಮಾಜದ ಹೆಸರಿನಲ್ಲಿ ಅಭಿವೃದ್ಧಿಯನ್ನ ಬಯಸದ ಮನೋಸ್ಥಿತಿ ಹೊಂದಿರುವ ಕೆಲವರು ದುಷ್ಟತನಕ್ಕೆ ಇಳಿದಿದ್ದು, ಸಮಾಜದವರು ಅರಿತುಕೊಳ್ಳಬೇಕಾಗಿದೆ. ರಜಿಸ್ಟರ್ ಇಲ್ಲದಿರುವ ಸಂಘದವರು ಯಾರಾದರೂ ಬಂದು ಕರಪತ್ರ ಹಂಚುತ್ತಿದ್ದರೇ ಅವರ ಮೇಲೆ ಯಾರೂ ಕಾನೂನು ಕೈಗೆ ತೆಗೆದುಕೊಳ್ಳುವುದು ಬೇಡ. ನೇರವಾಗಿ ಪೊಲೀಸ್ ಠಾಣೆಗೆ ಅವರನ್ನ ಒಪ್ಪಿಸಬೇಕು. ಇಂತಹದನ್ನ ಸಂಪೂರ್ಣವಾಗಿ ತಡೆಗಟ್ಟಲು ಭಾರತೀಯ ಜನತಾ ಪಕ್ಷದ ಸರಕಾರ ಸದಾಕಾಲ ಜನರೊಂದಿಗೆ ಇರುತ್ತದೆ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಹಲವು ರೀತಿಯಲ್ಲಿ ಅಪಪ್ರಚಾರ ಮಾಡುವ ಹುನ್ನಾರ ನಡೆಯುತ್ತಿದೆ. ಸಚಿವರು ಹಾಗೂ ಸುತ್ತಮುತ್ತಲಿನವರ ಬಗ್ಗೆ ಊಹಾಪೋಹಗಳನ್ನ ಸೃಷ್ಟಿಸಿ, ಸಮಾಜದಲ್ಲಿ ಒಡಕುಂಟು ಮಾಡುವ ಸಂಚು ರೂಪಿಸಲಾಗಿದೆ. ಪ್ರಾಮಾಣಿಕವಾಗಿ ಮಾಡಿರುವ ಸೇವೆಗಳ ಬಗ್ಗೆಯೂ ಅಸಹ್ಯವಾಗಿ ಉಲ್ಲೇಖಿಸುವ ತಂತ್ರಗಳನ್ನ ಹೆಣೆಯಲಾಗಿದ್ದು, ಇದಕ್ಕೆ ಸಮಾಜದವರು ಹಾಗೂ ಬಿಜೆಪಿಯವರು ಜಾಗೃತರಾಗಿರಬೇಕು. ಯಾವುದೇ ಕಾರಣಕ್ಕೂ ಕರಪತ್ರ ಹಂಚಲು ಬಂದವರ ಮೇಲೆ ಹಲ್ಲೆ ಮಾಡಬಾರದೆಂದು ಕೋರಿದ್ದಾರೆ.
ರಜಿಸ್ಟರ್ ಇಲ್ಲದ ಸಮಾಜದ “ನಕಲಿ” ಗಳು ಬಂದರೇ ಅವರನ್ನ ಹಿಡಿದು ನೇರವಾಗಿ ಪೊಲೀಸ್ ಠಾಣೆಗೆ ಒಪ್ಪಿಸಬೇಕು. ಸಮಾಜದಲ್ಲಿ ಒಡಕುಂಟು ಮಾಡಿ, ಒಬ್ಬರ ವಿರುದ್ಧ ಮತ್ತೊಬ್ಬರನ್ನ ಎತ್ತಿ ಕಟ್ಟುವ ಇಂತಹ ಘಟನೆಗಳು ನಡೆಯುತ್ತಿದ್ದು, ಯಾರೂ ಭಾವಾವೇಶಕ್ಕೆ ಒಳಗಾಗದೇ ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕು. ಇಂತಹ ದುಷ್ಟ ಕೂಟಗಳಿಗೆ ಸರಕಾರವೇ ತಕ್ಕ ಪಾಠವನ್ನ ಕಲಿಸಲಿದೆ ಎಂದು ಶರಣಪ್ಪಗೌಡ ಗೌಡ್ರ ಹಾಗೂ ಈರಣ್ಣ ಜಡಿ ಹೇಳಿದ್ದಾರೆ.