ಧಾರವಾಡ ಡಿಡಿಪಿಐ “ಕ್ರಾಸ್ ಡೆಪ್ಟೇಟೇಷನ್”- KV ಎಫೆಕ್ಟ್: ಆದೇಶದ “ಹೈ” ‘ಡ್ರಾಮಾ’….
1 min readಧಾರವಾಡ: ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿನ ಕಾನೂನು ಬಾಹಿರ ಆದೇಶಗಳ ಬಗ್ಗೆ ನಿರಂತರವಾಗಿ ಸತ್ಯಗಳನ್ನ ಹೊರ ಹಾಕುತ್ತಿದ್ದು, ಅದಕ್ಕೆ ಮೊದಲ ಯಶಸ್ಸು ಸಿಕ್ಕಿದೆ. ಆದರೆ, ಅಲ್ಲಿಯೂ ಡಿಡಿಪಿಐ ಅವರು ತೀಕ್ಷ್ಣವಾದ ಜಾಣತನವನ್ನ ಮೆರೆದು ಮತ್ತೊಬ್ವರನ್ನ ಉಳಿಸಿಕೊಳ್ಳುವುದಕ್ಕೆ ಮುಂದಾಗಿ, ತಮ್ಮ ಸುತ್ತಲೂ ವಿವಾದವನ್ನ ಜೀವಂತವಾಗಿಸಿಕೊಂಡಿದ್ದಾರೆ ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಯಾವುದೇ ನಿಯೋಜನೆ ಮಾಡಬಾರದು ಎಂದು ಆದೇಶವಿದ್ದರೂ ನೇಕಾರನಗರದ ಶಾಲೆಯ ಹೆಡ್‌ಮಾಸ್ಟರ್ ಜೊತೆ ಚಪ್ಪಲಿಯಿಂದ ಬಡಿದಾಡಿಕೊಂಡವರನ್ನ ಧಾರವಾಡ ತಾಲೂಕಿನ ಶಾಲೆಯೊಂದಕ್ಕೆ ಡೆಪ್ಟೇಟೇಷನ್ ಮಾಡಲಾಗಿತ್ತು. ಆದರೆ, ನೇಕಾರನಗರದಲ್ಲಿನ 450 ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಕಾಣಲೇ ಇಲ್ಲ.
ಬಡಿದಾಡಿಕೊಂಡ ಮಾಸ್ತರ್ ಡೆಪ್ಟೇಟೇಷನ್ ಮೂಲಕ ಧಾರವಾಡ ತಾಲೂಕಿಗೆ ಬರುವ ಮುನ್ನ, ಅದೇ ಶಾಲೆಯ ದೈಹಿಕ ಶಿಕ್ಷಕರೊಬ್ಬರನ್ನ ಧಾರವಾಡ ಶಹರ ವಿಭಾಗಕ್ಕೆ (ಇಲ್ಲದ ಪೋಸ್ಟ್) ಡೆಪ್ಟೇಟೇಷನ್ ಮಾಡಲಾಯಿತು. ಯಾವಾಗ ಕರ್ನಾಟಕವಾಯ್ಸ್. ಕಾಂ ಇಲಾಖೆಯಲ್ಲಿನ ತಳಕನ್ನ ಹೊರ ಹಾಕಲು ಶುರು ಮಾಡಿತೋ, ಆಗ ಕಾಟಾಚಾರದ ಆದೇಶ ಮಾಡಿದ್ದಾರಂತೆ.
ಯಾವ ನೇಕಾರನಗರದ ಶಾಲೆಯಿಂದ ಬಡಿದಾಡಿಕೊಂಡು ಬಂದಿದ್ದರೋ ಅವರನ್ನ ಮಾತ್ರ ಮರಳಿ ಆ ಶಾಲೆಗೆ ನಿಯೋಜನೆ ಮಾಡಿದ್ದಾರಂತೆ. ಆದರೆ, ಪೋಸ್ಟ್ ಇಲ್ಲದೆ ಅನಧಿಕೃತವಾಗಿ ಇರುವ ದೈಹಿಕ ಶಿಕ್ಷಕರನ್ನ ಮರಳಿ ಆದೇಶ ಮಾಡಿಲ್ಲ. ಹಾಗಂದರೇ, ಡಿಡಿಪಿಐ ಅವರು ಯಾರನ್ನ ಉಳಿಸಿಕೊಳ್ಳಲು ಮತ್ತೂ ಯಾರಿಗಾಗಿ ಈ ಗೊಂದಲ ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಅಮಾಯಕರಂತೆ ಕಾಣುವ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರಿಗೆ ಮನಿಹೊಡೆದವರು ದಾರಿ ತಪ್ಪಿಸಿ ಡ್ರಾಫ್ ಮಾಡಿಸುತ್ತಿದ್ದಾರಾ ಎಂಬುದು ಕೂಡಾ ಯಕ್ಷಪ್ರಶ್ನೆಯಾಗಿದೆ.
ಆದೇಶದ ಪ್ರತಿ ಕರ್ನಾಟಕವಾಯ್ಸ್. ಕಾಂಗೆ ಸಿಕ್ಕ ತಕ್ಷಣವೇ ಪ್ರತಿಯಲ್ಲಿನ ಸತ್ಯ ಮತ್ತಷ್ಟು ಹೊರಗೆ ಬರಲಿದೆ.