ಧಾರವಾಡ: ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ “ದಾದ್ ನೈ, ಫೀರಾದ್ ನೈ” ಸ್ಥಿತಿ: ಡಿಸಿಯವರೇ ಇದನ್ನ ಗಮನಿಸಿ…!!!
1 min readಕಲಘಟಗಿ: ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ತಡೆಯಲು ಜಿಲ್ಲಾಡಳಿತ ಹಲವು ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ. ಆದರೆ, ಇರುವ ಸಮಸ್ಯೆಯನ್ನ ಅಲ್ಲಿಯೇ ಬಿಟ್ಟು ಜಾಗೃತೆ ಮೂಡಿಸುತ್ತಿರುವುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ.
ಈ ವೀಡಿಯೋ ಪೂರ್ಣವಾಗಿ ನೋಡಿ…
ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಜನತಾ ಪ್ಲಾಟ್‌ನಲ್ಲಿರುವ ಈ ತೊಂದರೆಯನ್ನು ಬಗೆಹರಿಸಲು ಗ್ರಾಪಂನ ಯಾರೂ ಮುಂದೆ ಬರುತ್ತಿಲ್ಲ. ಇಂತಹ ಅವ್ಯವಸ್ಥೆಯ ಪಕ್ಕದಲ್ಲಿ ಪ್ರಾಥಮಿಕ ಶಾಲೆಯೂ ಇದೆ. ಆದರೂ ಇಷ್ಟೊಂದು ನಿರ್ಲಕ್ಷ್ಯವನ್ನ ವಹಿಸಲಾಗಿದೆ.
ಈಗಲಾದರೂ ಈ ತೊಂದರೆಯನ್ನ ನಿವಾರಿಸಿ, ಜನರ ಆರೋಗ್ಯವನ್ನ ಕಾಪಾಡಲು ಮುಂದಾಗುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.