ಕುಸಿಯುತ್ತಿದೆ ನವಲೂರು ಸೇತುವೆ: ಹುಷಾರಾಗಿ ಸಂಚರಿಸಿ-ಅಧಿಕಾರಿಗಳೇ ನೋಡ್ತೀರಾ ಇದನ್ನ..
ಧಾರವಾಡ: ಹಲವು ವರ್ಷಗಳಿಂದ ನಡೆಯುತ್ತಿರುವ ಬಿಆರ್ ಟಿಎಸ್ ಕಾಮಗಾರಿ ಹೇಗಾಗಿದೆ ಎನ್ನುವುದಕ್ಕೆ ಸಾಕ್ಷಿಯಂಬಂತೆ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದ್ದು, ಸಾರ್ವಜನಿಕರು ಆತಂಕಪಡುವಂತಾಗಿದೆ.
ನವಲೂರು ಬಳಿಯ ಸೇತುವೆಯ ಎಡಭಾಗದಲ್ಲಿನ ಪ್ಲೇಟ್ ಗಳು ಕುಸಿದು ಬಿದ್ದಿದ್ದು, ಒಳಗಿರುವ ಮಣ್ಣು ಕುಸಿಯುತ್ತಿದ್ದು ಮುಖ್ಯ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗುವ ಸ್ಥಿತಿ ಬಂದೋದಗಿದೆ.
ಈಗಾಗಲೇ ಸುಮಾರು ಸುಮಾರು ಸಿಮೆಂಟ್ ಗ್ರೀಫ್ ಗಳು ಕುಸಿದುಬಿದ್ದಿದ್ದು, ಟನಗಟ್ಟಲೇ ಮಣ್ಣು ಹೊರ ಬೀಳತೊಡಗಿದೆ. ಇದೇ ಸೇತುವೆಯ ಮೇಲೆ ಚಿಗರಿ ಬಸ್ಸುಗಳು ಸೇರಿದಂತೆ ಖಾಸಗಿ ವಾಹನಗಳು ಸಂಚರಿಸುತ್ತಿವೆ. ಈ ಪ್ರಕರಣದಿಂದ ಕಾಮಗಾರಿಯ ಕ್ವಾಲಿಟಿ ಬಗ್ಗೆ ಸಂಶಯ ಮೂಡಿದ್ದು, ಸೇತುವೆಯೇ ಸ್ಥಿತಿಯೇ ಹೀಗಾದ್ರೇ ಹೇಗೆ ಎನ್ನುವಂತಾಗಿದೆ.
ಸೇತುವೆಯ ಬಳಿ ಮಣ್ಣು ಕುಸಿದಿದ್ದನ್ನ ನೋಡಿದ ಸ್ಥಳೀಯರು, ಆತಂಕದಿಂದ ಅಧಿಕಾರಿಗಳಿಗೆ ವಿಷಯವನ್ನ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈಗಲೇ ಹೋಗಿ ಇದನ್ನ ನೋಡುವುದು ಒಳಿತು.