ಪತ್ರಕರ್ತ ಮುಸ್ತಫಾ ಕುನ್ನಿಬಾವಿ ಸಹೋದರ ನಜೀರಅಹ್ಮದ ಇನ್ನಿಲ್ಲ… ಇಂದು ಧಾರವಾಡದಲ್ಲಿ ಅಂತ್ಯಕ್ರಿಯೆ…

ಧಾರವಾಡ: ನಜೀರ್ ಅಹ್ಮದ ರಾಜೇಸಾಬ ಕುನ್ನಿಭಾವಿ (68) ಅವರು ಕಳೆದ ರಾತ್ರಿ ಧಾರವಾಡದ ಸ್ವಗೃಹದಲ್ಲಿ ಪೈಗಂಬರವಾಸಿಗಳಾದರು.
ಮೃತರು ಪತ್ರಕರ್ತ ಮುಸ್ತಫಾ ಕುನ್ನಿಭಾವಿಯವರ ಹಿರಿಯ ಸಹೋದರರಾಗಿದ್ದಾರೆ. ನಜೀರಅಹ್ಮದ ಅವರು ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಧಾರವಾಡದ ಜನ್ನತ್ ನಗರದ ಖಬರಸ್ಥಾನದಲ್ಲಿ ಇಂದು (ಸೋಮವಾರ) ಮಧ್ಯಾಹ್ನ 1 ಘಂಟೆಗೆ ನೆರವೇರಲಿದೆ.