ಧಾರವಾಡದ ಮುರುಘಾಮಠದಲ್ಲಿ “ನಿಕ್ಕರ್ ಮೇಲೆ ನಿಲ್ಲಿಸಿ”- ನಡೆದ್ದದ್ದಾರೂ ಏನು ಗೊತ್ತಾ…!? Viral Video

ಧಾರವಾಡ: ಪ್ರತಿಷ್ಠಿತ ಮುರುಘಾಮಠದಲ್ಲಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರನ್ನ ನಿಕ್ಕರ್ ಮೇಲೆ ನಿಲ್ಲಿಸಿ ವೀಡಿಯೋ ಮಾಡಿ ಹರಿಬಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳತನ ನಡೆದಿದೆ ಎಂಬ ಮಾಹಿತಿ ಆಧರಿಸಿ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲನೆ ನಡೆಸಿದ ಸಮಯದಲ್ಲಿ ಇಬ್ಬರು ಬಂದು ಹೋಗಿರುವುದು ಗೊತ್ತಾಗಿದೆ. ಇದಾದ ನಂತರ ಅವರುಗಳನ್ನ ಹಿಡಿದು ವೀಡಿಯೋ ಮಾಡಲಾಗಿದೆ.
ವೈರಲ್ ಆಗಿರುವ ವೀಡಿಯೋ ಇಲ್ಲಿದೆ…
ವೈರಲ್ ಆಗಿರುವ ವೀಡಿಯೋದಲ್ಲಿ ಭಯಭೀತಗೊಂಡಿರುವ ಅಪ್ರಾಪ್ತರನ್ನ ಬೆದರಿಸುವ ಹೇಳಿಕೆಗಳು ಕೂಡಾ ಕೇಳಿ ಬರುತ್ತಿವೆ. ಮಠದ ಈ ಪ್ರಕರಣ ಸೋಜಿಗ ಮೂಡಿಸಿದೆ.