ಗೋವನಕೊಪ್ಪದ ಬಳಿ “ಮುಖ ಜಜ್ಜಿ” ಧಾರವಾಡ ಮಹಿಳೆಯ “ಭೀಕರ ಹತ್ಯೆ”…

ಧಾರವಾಡ: ಮಧ್ಯವಯಸ್ಕ ಮಹಿಳೆಯೊಬ್ಬಳ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣ ಧಾರವಾಡ ತಾಲೂಕಿನ ಗೋವನಕೊಪ್ಪದ ಸಮೀಪ ಬೆಳಕಿಗೆ ಬಂದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಧಾರವಾಡದ ಕೊಂಡವಾಡ ಓಣಿಯ ರೂಪಾ ಲಕ್ಷ್ಮಣ ಸವದತ್ತಿ ಎಂಬ 45 ವಯಸ್ಸಿನ ಮಹಿಳೆಯೇ ಕೊಲೆಯಾಗಿದ್ದು, ತಲೆ, ಮುಖಕ್ಕೆ ಕಲ್ಲಿನಿಂದ ಹೊಡೆಯಲಾಗಿದೆ.
ಈ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮಹಿಳೆಯನ್ನ ಇಲ್ಲಿಗೆ ಕರೆದುಕೊಂಡು ಬಂದು ಹತ್ಯೆ ಮಾಡಲಾಗಿದೇಯಾ ಅಥವಾ ಬೇರೆ ಕಡೆ ಮಾಡಿ ಇಲ್ಲಿ ಎಸೆಯಲಾಗಿದೇಯಾ ಎಂದು ತಿಳಿಯಲು ಮುಂದಾಗಿದ್ದಾರೆ.