Big Exclusive- ಧಾರವಾಡದಲ್ಲೊಂದು “ಹೇಯ ರಾಕ್ಷಸಿ ಕೃತ್ಯ”- ಮಾನವೀಯತೆ ಮರೆತ ಯುವಕರ ಪಡೆಯಿಂದ “ಉಸಿರು” ಬಿಟ್ಟ ವ್ಯಕ್ತಿ….

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ರಾಕ್ಷಸಿ ಕೃತ್ಯ ನಡೆದಿದ್ದು, ಅಮಾಯಕ ಬುದ್ಧಿಮಾಂದ್ಯನನ್ನ ಕಲ್ಲು ಹೊಡೆದು ಹತ್ಯೆ ಮಾಡಿರುವ ಘಟನೆ ಎಪಿಎಂಸಿಯಲ್ಲಿ ಸಂಭವಿಸಿದೆ.
ಸುಮಾರು ನಲವತ್ತರಿಂದ ನಲವತೈದು ವಯಸ್ಸಿನ ವ್ಯಕ್ತಿಯೇ ಸಾವಿಗೀಡಾಗಿದ್ದು, ಎಸಿಪಿ ಸಿದ್ಧನಗೌಡರ ಸೇರಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ದಯಾನಂದ ಶೇಗುಣಿಸಿ ಅವರು ಸಿವಿಲ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಬುದ್ಧಿಮಾಂದ್ಯತೆಯನ್ನು ಹೊಂದಿರುವ ವ್ಯಕ್ತಿಗೆ ಕಲ್ಲಿನಿಂದ ಒಗೆದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಇದರಿಂದ ಆತ ಸಾವಿಗೀಡಾಗಿದ್ದು, ಘಟನೆಯ ಹಿನ್ನೆಲೆಯನ್ನ ಪೊಲೀಸರು ಕಲೆ ಹಾಕುತ್ತಿದ್ದು, ಸ್ಥಳಕ್ಕೆ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಕೆಲವೇ ಸಮಯದಲ್ಲಿ ಭೇಟಿ ನೀಡಲಿದ್ದಾರೆ.
ರಾಕ್ಷಸಿ ಕೃತ್ಯ ಎಸಗಿರುವ ಕಿರಾತಕರನ್ನ ಪೊಲೀಸರು ಹೆಡಮುರಿಗೆ ಕಟ್ಟಬೇಕಿದೆ.