ಅಖಂಡ ಧಾರವಾಡ ಜಿಲ್ಲೆಯ “ಬಿಜೆಪಿ ಶಾಸಕನ ಆಡೀಯೋ ವೈರಲ್” ಬೆನ್ನಲ್ಲೇ ‘Mla ಸೇರಿ ನಾಲ್ವರ’ ಮೇಲೆ FIR…!!!
ಅವಾಚ್ಯ ಶಬ್ದಗಳಿಂದ ನಿಂದನೆ: ಬಿಜೆಪಿ ಶಾಸಕನ ಮೇಲೆ FIR ದಾಖಲು
ಗದಗ: ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಮತ್ತು ಅವರ ಬೆಂಬಲಿಗರ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಈ ಕುರಿತು ಚನ್ನಪಟ್ಟಣ ಗ್ರಾಮದ ನಿವಾಸಿ ಹಾಗೂ ಬಿಜೆಪಿ ಕಾರ್ಯಕರ್ತ ನಾಮದೇವ ಮಾಂಡ್ರೆ ದೂರು ನೀಡಿದ್ದಾರೆ.
ಶಾಸಕ ಡಾ. ಚಂದ್ರು ಲಮಾಣಿ ಅವರು ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬುದು ಆರೋಪವಾಗಿದ್ದು, ಜೊತೆಗೆ ಶಾಸಕ ಹಾಗೂ ಅವರ ಬೆಂಬಲಿಗರು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ನಾಮದೇವ ಮಾಂಡ್ರೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. A-1: ಡಾ. ಚಂದ್ರು ಲಮಾಣಿ, ಶಾಸಕ, ಶಿರಹಟ್ಟಿ, A-2: ರಾಜು ಖಾನಪ್ಪನವರ್, ಹಿಂದೂ ಸಂಘಟನೆ ಮುಖಂಡ, A-3: ಸಂತೋಷ ಕುರಿ, ಹಿಂದೂ ಸಂಘಟನೆ ಮುಖಂಡ, A-4: ಪಕ್ಕಿರೇಶ ರಟ್ಟಿಹಳ್ಳಿ, ಸಂಘಟನಾಕಾರ ವಿರುದ್ದ ದೂರು ದಾಖಲಾಗಿದೆ. ದೂರು ಆಧಾರಿಸಿ, ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಕಲಂ 351(2), 352 R/W 3(5), BNS 2023 ಅಡಿ ಪ್ರಕರಣ ದಾಖಲಿಸಲಾಗಿದೆ.
