ಧಾರವಾಡ: “ಎಕ್ಸಿಕ್ಯುಟಿವ್ ಇಂಜಿನಿಯರ್” ಮಗನ ಮದುವೆಯಲ್ಲಿ ವಜ್ರ, ಚಿನ್ನ ಸಹಿತ ಲಕ್ಷ ಲಕ್ಷ ಹಣ ಹಾಡುಹಗಲೇ ಲೂಟಿ….!!!

ಧಾರವಾಡ: ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಓರ್ವರ ಪುತ್ರನ ಮದುವೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರ, ಚಿನ್ನ ಸಹಿತ ನಗದನ್ನ ದೋಚಿಕೊಂಡು ಪರಾರಿಯಾಗಿರುವ ಪ್ರಕರಣ ಸಂಭವಿಸಿದೆ.
ಮೇ ತಿಂಗಳಲ್ಲಿ ನಿವೃತ್ತಿಯಾಗಲಿರುವ ಗಂಗಾದರಪ್ಪ ಪಟ್ಟಣಶೆಟ್ಟಿ ಎಂಬುವವರ ಮಗ ಡಾ.ಶರಣಪ್ಪ ಹಾಗೂ ಹುಬ್ಬಳ್ಳಿ ಅಧ್ಯಾಪಕನಗರದ ಅರುಣಕುಮಾರ ಗಿರಿಯಾಪುರ ಅವರ ಪುತ್ರಿ ಡಾ.ಪೂಜಾ ಅವರ ಮದುವೆಯ ಕಾರ್ಯಕ್ರಮದಲ್ಲಿ ಲೂಟಿ ಮಾಡಲಾಗಿದೆ.
ಮದುವೆಯ ಸಂಭ್ರಮದಲ್ಲಿ ಎಲ್ಲರೂ ಕೂಡಿಕೊಂಡು ಇರುವಾಗಲೇ ಸುಮಾರು 800 ಗ್ರಾಂ ಚಿನ್ನ, ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರ ಹಾಗೂ ಸುಮಾರು 50 ಲಕ್ಷ ರೂಪಾಯಿ ನಗದನ್ನ ದೋಚಲಾಗಿದೆ.
ಆರೋಪಿಯು ಬಾಗಿನಲ್ಲಿ ಹಾಕಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ವಿದ್ಯಾಗಿರಿ ಠಾಣೆಯ ಪೊಲೀಸರು ಪ್ರಕರಣದ ಕುರಿತು ವಿಷಯ ಸಂಗ್ರಹಿಸುತ್ತಿದ್ದು, ಆರೋಪಿಯ ಪತ್ತೆಗಾಗಿ ಜಾಲ ಬೀಸಲಾಗಿದೆ.