ಧಾರವಾಡ ಮೇದಾರ ಓಣಿಯಲ್ಲಿ ಕಬ್ಬು ತುಂಬಿದ ಟೇಲರ್ ಪಲ್ಟಿ: ಇದ್ದವರೆಲ್ಲರೂ ಓಡಿದ್ದೇ ಓಡಿದ್ದು..!

ಧಾರವಾಡ: ಎರಡು ಟೇಲರನಲ್ಲಿ ಕಬ್ಬು ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕರನ ಒಂದು ಟೇಲರ್ ಪಲ್ಟಿಯಾದ ಘಟನೆ ಧಾರವಾಡ ನಗರದ ಮೇದಾರ ಓಣಿಯ ಪಕ್ಕುಬಾಯಿ ಅಡ್ಡೆ ಬಳಿ ನಡೆದಿದೆ.
ಧಾರವಾಡ ನಗರದಿಂದ ಸವದತ್ತಿಗೆ ಹೊರಟಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರನ ಟೇಲರ ಪಲ್ಟಿಯಾಗುತ್ತಿದ್ದಂತೆ ಅಕ್ಕಪಕ್ಕದವರು ದಿಕ್ಕಾಪಾಲಾಗಿ ಓಡಿದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಬ್ಬು ರಸ್ತೆಯಲ್ಲಿಯೇ ಬಿದ್ದ ಪರಿಣಾಮ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಟ್ಯಾಕ್ಟರ್ ಚಾಲಕನ ನಿರ್ಲಕ್ಷ್ಯತನದಿಂದಲೇ ಟೇಲರ್ ಪಲ್ಟಿಯಾಗಿದ್ದು, ಯಾವುದೇ ಅವಘಡ ಸಂಭವಿಸಿಲ್ಲ. ತಕ್ಷಣವೇ ರಸ್ತೆಯಲ್ಲಿ ಬಿದ್ದಿರುವ ಕಬ್ಬನ್ನ ತೆರವು ಮಾಡುವ ಯತ್ನ ನಡೆದಿದ್ದು, ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.