ಧಾರವಾಡ: “ದೊಡ್ಡವರ ಗುದಮುರಗಿ” ಮಠ ಬಿಟ್ಟು ಹೊರ ನಡೆದಿರುವ “ಖಾವಿ ಧಾರಿ”… Exclusive
1 min readಧಾರವಾಡ: ಲೋಕಸಭಾ ಚುನಾವಣೆಯ ಕಾವು ಧಾರವಾಡ ಜಿಲ್ಲೆಯಲ್ಲಿ ವಿವಿಧ ಸ್ವರೂಪ ಪಡೆಯುತ್ತಿರುವ ಸಮಯದಲ್ಲಿಯೇ ಜಿಲ್ಲೆಯ ಪ್ರತಿಷ್ಠಿತ ಮಠದ ಸ್ವಾಮಿಗಳೊಬ್ಬರು ಮಠದಿಂದ ಹೊರನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೆಲವು ತಿಂಗಳುಗಳ ಹಿಂದಷ್ಟೇ ವಿವಾದವುಂಟು ಮಾಡುವ ಪ್ರಯತ್ನ ನಡೆಯುತ್ತಿದ್ದ ಸಮಯದಲ್ಲಿಯೇ, ಅದ್ಧೂರಿ ಸ್ವಾಗತದಿಂದ ಮಠದೊಳಗೆ ಸ್ವಾಮಿಗಳನ್ನ ಪ್ರವೇಶ ಮಾಡಿಸಿ, ಭಕ್ತ ಸಮೂಹ ಸಂತಸಗೊಂಡಿದ್ದರು.
ಇದೇ ಮಠದ “ದೊಡ್ಡವರ” ನಡವಳಿಕೆಯಿಂದ ಕಳೆದ ನಾಲ್ಕೈದು ದಿನಗಳಿಂದ ಮಹಾಸ್ವಾಮಿಗಳು ಮಠವನ್ನ ತೊರೆದು ಹೋಗಿದ್ದಾರೆಂದು ಖಚಿತ ಮೂಲಗಳಿಂದ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.
ಪ್ರತಿಷ್ಠಿತ ಮಠದ ಶ್ರೀಗಳು, ಭಕ್ತರಿಗೆ ಬೇಕಾಗಿದ್ದು ಸ್ವಾಮಿಗಳನ್ನ ಮತ್ತೆ ಮಠಕ್ಕೆ ಕರೆತರುವ ಬಗ್ಗೆ ಮಾತುಕತೆ ನಡೆದಿದೆಯಂತೆ. ಆದರೆ, ಸ್ವಾಮಿಗಳು ದೊಡ್ಡ ಭಕ್ತನ ಸಮಸ್ಯೆಯಿಂದ ದೂರವುಳಿಯಲು ಮುಂದಾಗಿದ್ಸಾರೆನ್ನಲಾಗಿದೆ.