ಎಂ.ಎನ್.ಮೋರೆ ತಂಡಕ್ಕೆ “3ನೇ” ಬಾರಿ ವಿಜಯಮಾಲೆ- ಗಣನೆಗೆ ಬಾರದ ಚವ್ಹಾಣ ಟೀಂ…

ಧಾರವಾಡ: ತೀವ್ರ ಕುತೂಹಲ ಮೂಡಿಸಿದ್ದ ಮರಾಠಾ ವಿದ್ಯಾಪ್ರಸಾರಕ ಮಂಡಳದ ಚುನಾವಣೆಯಲ್ಲಿ ಮೂರನೇಯ ಬಾರಿಗೆ ಉದ್ಯಮಿ ಎಂ.ಎನ್.ಮೋರೆ ತಂಡ ಜಯಭೇರಿ ಬಾರಿಸಿದೆ.
ನಿನ್ನೆ ಸಂಜೆ ಆರಂಭವಾಗಿದ್ದ ಮತ ಎಣಿಕೆಯೂ ತಡರಾತ್ರಿವರೆಗೂ ನಡೆಯಿತು. ಮೊದಲಿಂದಲೂ ಮುಂಚೂಣಿಯಲ್ಲಿದ್ದ ಮೋರೆ ತಂಡವೂ ಹೆಚ್ಚು ಮತಗಳನ್ನ ಪಡೆಯುವ ಮೂಲಕ ವಿಜಯದ ಮಾಲೆ ಧರಿಸಿಕೊಂಡರು.
ಪ್ರತಾಪ ಚವ್ಹಾಣ ತಂಡವೂ ಈ ಬಾರಿ ಗೆಲು ಕಾಣಬೇಕೆಂದು ಸಾಕಷ್ಟು ಕಸರತ್ತು ನಡೆಸಿತ್ತು. ಹಲವು ಘೋಷಣೆಗಳನ್ನ ಕೂಡ ಮಾಡಿತ್ತು. ಆದರೆ, ಸಮಾಜದವರು ಮೋರೆ ತಂಡವನ್ನ ಕೈ ಹಿಡಿಯುವ ಮೂಲಕ ಹ್ಯಾಟ್ರಿಕ್ ಸಾಧನೆಗೆ ಪ್ರೇರಕರಾಗಿದ್ದಾರೆ.