ಧಾರವಾಡ- ಬಾರ್ ಮ್ಯಾನೇಜರ ಅಪಘಾತ ಪ್ರಕರಣ: ಕೊಲೆ ಸಂಚು..?
1 min readಧಾರವಾಡ: ಕಳೆದ ಎರಡು ದಿನದ ಹಿಂದೆ ಮರಾಠಾ ಕಾಲನಿಯಲ್ಲಿ ಬೈಕ್ ಸ್ಕೀಡ್ ಆಗಿ ತೀವ್ರವಾಗಿ ಗಾಯಗೊಂಡಿದ್ದ ಬಾರವೊಂದರ ಮ್ಯಾನೇಜರ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ಆತ ಬೈಕಿನಿಂದ ಬಿದ್ದು ಗಾಯಗೊಂಡಿದ್ದಿಲ್ಲ, ಯಾರೋ ಡಿಕ್ಕಿಪಡಿಸಿ ಗಾಯಗೊಳಿಸಿ ಪರಾರಿಯಾಗಿದ್ದಾರೆಂದು ಮನೆಯವರು ಹೇಳಿಕೊಳ್ಳುತ್ತಿದ್ದಾರೆ.
ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಮಂಜುನಾಥ ಗೋಪಾಲ ಮಲ್ಲೂರ ಎಂಬುವವರೇ ಮರಾಠಾ ಕಾಲನಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನ ಸ್ಥಳೀಯರು ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿದ್ದರಾದರೂ, ನಂತರ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಎರಡು ದಿನದ ಚಿಕಿತ್ಸೆ ಫಲಿಸದ ಕಾರಣ ಮಂಜುನಾಥ ಸಾವಿಗೀಡಾಗಿದ್ದಾರೆ.
ಇದೇ ಮಂಜುನಾಥನ ಮೇಲೆ 2019ರಲ್ಲಿ ಚಾಕುವಿನಿಂದ ಇರಿಯಲಾದ ಪ್ರಕರಣ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆಗಿನಿಂದಲೂ ಮಂಜುನಾಥನ ಮೇಲೆ ದ್ವೇಷ ಹೊಂದಿದ್ದರು. ಅವರೇ ಮತ್ತೆ ಇಂತಹದ್ದನ್ನ ಮಾಡಿ ಪರಾರಿಯಾಗಿರಬಹುದೆಂಬ ಸಂಶಯ ಮನೆಯವರನ್ನ ಕಾಡುತ್ತಿದೆ.
ವಿದ್ಯಾಗಿರಿ ಠಾಣೆಯಲ್ಲಿ ಕೇಸ್ ಸಂಖ್ಯೆ 116/19ನೇದ್ದು ಮಂಜುನಾಥನ ಮೇಲೆ ಹಲ್ಲೆ ಮಾಡಿರುವ ಪ್ರಕರಣವಾಗಿದೆ. ಹೀಗಾಗಿ, ಇದರ ಹಿಂದೆ ಬೇರೆಯದ್ದೇ ಪಿತೂರಿ ಇರಬಹುದೆಂದು ಶಂಕಿಸಲಾಗಿದ್ದು, ಮನೆಯವರು ಮತ್ತೊಂದು ದೂರು ದಾಖಲು ಮಾಡಲು ಮುಂದಾಗಿದ್ದಾರೆಂದು ಹೇಳಲಾಗಿದೆ.