ಧಾರವಾಡದ “ಕೋಟ್ಯಾಧೀಶ ಪೊಲೀಸ್” ಬಂಡವಾಳ ಬಯಲು ಮಾಡಿ “FIR” ದಾಖಲಿಸಿದ ಲೋಕಾಯುಕ್ತರು…

ಧಾರವಾಡ: ಸತ್ತೂರ ಮೂಲದ ಧಾರವಾಡ ಶಹರ ಠಾಣೆಯ ಪೊಲೀಸ್ ಶಿವಾನಂದ ಮಾನಕರ ಎಷ್ಟೊಂದು ಅಕ್ರಮ ಆಸ್ತಿ ಗಳಿಸಿದ್ದಾನೆಂಬ ಮಾಹಿತಿಯನ್ನ ಅಧಿಕೃತವಾಗಿ ಲೋಕಾಯುಕ್ತ ಪೊಲೀಸರು ಬಹಿರಂಗ ಮಾಡಿದ್ದು, ಓರ್ವ ಪೊಲೀಸ್ ಇಷ್ಟೊಂದು ಶ್ರೀಮಂತ ಆಗಲು ಸಾಧ್ಯವೇ ಎನ್ನುವಂತಿದೆ.
ಧಾರವಾಡದ ಪೊಲೀಸ್ ಶಿವಾನಂದನ ಬಳಿ ಎರಡು ಮನೆಗಳು, ಎಂಟು ಖಾಲಿ ಸೈಟುಗಳು, ಎರಡು ಕಾರು, ಮೂರು ಬೈಕ್ ಸೇರಿದಂತೆ ಚಿನ್ನ ಬೆಳ್ಳಿ ಕೂಡಾ ಲಭಿಸಿದೆ.
ಲೋಕಾಯುಕ್ತರು ಈ ಬಗ್ಗೆ ಪ್ರಕರಣ ದಾಖಲು ಮಾಡಿದ್ದು, ಸಂಪೂರ್ಣ ಮಾಹಿತಿ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.