ಧಾರವಾಡ: ಮೂರೇ ಕ್ಷೇತ್ರದಲ್ಲಿ ಹೆಚ್ಚು ಮತ ಪಡೆದರೂ “ಬಿಜೆಪಿ” ಜಯದ ಲೀಡ್ ಕಡಿಮೆ ಮಾಡಿ “ಗೆದ್ದು ಸೋತ ವಿನೋದ”…

ಧಾರವಾಡ: ಕೇಂದ್ರದ ಸಚಿವ ಪ್ರಲ್ಹಾದ ಜೋಶಿಯವರು ಐದನೇಯ ಬಾರಿಗೆ ಗೆಲ್ಲುವ ಮೂಲಕ ಇತಿಹಾಸ ಮೂಡಿಸಿದ್ದಾರೆ. ಆದರೆ, ಗೆಲುವಿನ ನಾಗಾಲೋಟದಲ್ಲಿ ಕಳೆದ ಬಾರಿಯ ಲೀಡ್ ಈ ಬಾರಿ ಅರ್ಧಕ್ಕೂ ಹೆಚ್ಚು ಕಡಿಮೆ ಆಗಿದೆ.
ಕುರುಬ ಸಮಾಜದ ಯುವಕ ವಿನೋದ ಅಸೂಟಿಯವರಿಗೆ ಟಿಕೆಟ್ ನೀಡಿದಾಗ, ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲುವ ಮಾತುಗಳನ್ನ ಹೇಳಲಾಗಿತ್ತು. ಆದರೆ, ಅಖಾಡಾ ರೆಡಿಯಾದ ಮೇಲೆ ಚಿತ್ರಣವೇ ಬದಲಾಗಿದೆ.
ಕ್ಷೇತ್ರವಾರು ವಿವರ ಇಲ್ಲಿದೆ ನೋಡಿ…
ಧಾರವಾಡ ಲೋಕಸಭಾ ಕ್ಷೇತ್ರದದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ಪಡೆದ ಮತಗಳ ವಿವರ.
*ನವಲಗುಂದ ಕ್ಷೇತ್ರ*
1)ಪ್ರಲ್ಹಾದ್ ಜೋಶಿ-70990
2) ವಿನೋದ ಅಸೂಟಿ-88202
ಕಾಂಗ್ರೆಸ್ ಲೀಡ್-17212
*ಕುಂದಗೋಳ ಕ್ಷೇತ್ರ*
1) ಪ್ರಲ್ಹಾದ್ ಜೋಶಿ- 75544
2) ವಿನೋದ ಅಸೂಟಿ-73884
ಬಿಜೆಪಿ ಲೀಡ್-1660
*ಧಾರವಾಡ ಕ್ಷೇತ್ರ*
1) ಪ್ರಹ್ಲಾದ್ ಜೋಶಿ- 93542
2) ವಿನೋದ ಅಸೂಟಿ- 72226
ಬಿಜೆಪಿ ಲೀಡ್-21316
*ಹು-ಧಾ ಪೂರ್ವ ಕ್ಷೇತ್ರ*
1) ಪ್ರಲ್ಹಾದ್ ಜೋಶಿ-67097
2)ವಿನೋದ ಅಸೂಟಿ-93873
ಕಾಂಗ್ರೆಸ್ ಲೀಡ್-26776
*ಹು-ಧಾ ಸೆಂಟ್ರಲ್ ಕ್ಷೇತ್ರ*
1) ಪ್ರಲ್ಹಾದ್ ಜೋಶಿ- 113086
2) ವಿನೋದ ಅಸೂಟಿ-62369
ಬಿಜೆಪಿ ಲೀಡ್-51326
*ಹು-ಧಾ ಪಶ್ಚಿಮ ಕ್ಷೇತ್ರ*
1) ಪ್ರಲ್ಹಾದ್ ಜೋಶಿ- 113086
2) ವಿನೋದ ಅಸೂಟಿ- 71498
ಬಿಜೆಪಿ ಲೀಡ್-41588
*ಕಲಘಟಗಿ ಕ್ಷೇತ್ರ*
1) ಪ್ರಲ್ಹಾದ್ ಜೋಶಿ- 96402
2) ವಿನೋದ ಅಸೂಟಿ- 63665
ಬಿಜೆಪಿ ಲೀಡ್- 32737
*ಶಿಗ್ಗಾಂವಿ ಕ್ಷೇತ್ರ*
1)ಪ್ರಲ್ಹಾದ್ ಜೋಶಿ- 83310
2) ವಿನೋದ ಅಸೂಟಿ-91908
ಕಾಂಗ್ರೆಸ್ ಲೀಡ್-8598
*ಪೋಸ್ಟಲ್ ಬ್ಯಾಲೆಟ್*
1) ಪ್ರಹ್ಲಾದ್ ಜೋಶಿ-2582
2) ವಿನೋದ ಅಸೂಟಿ- 1291
ಕೇವಲ ನವಲಗುಂದ, ಹು/ಧಾ ಪೂರ್ವ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಸಿಕ್ಕಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ನಿಂತಿದ್ದ ವಿನಯ ಕುಲಕರ್ಣಿಯವರು 479765 ಮತಗಳನ್ನ ಪಡೆದಿದ್ದರು. ವಿನೋದ ಅಸೂಟಿ ಈ ಬಾರಿ 618907 ಮತಗಳನ್ನ ಪಡೆದು, ಕಳೆದ ಬಾರಿಗಿಂತ ಈ ಸಲ 139142 ಮತಗಳನ್ನ ಹೆಚ್ಚುವರಿಯಾಗಿ ಪಡೆದಿದ್ದಾರೆ.
ಈ ಬಾರಿ ಮೂರನೇಯ ಸ್ಥಾನವನ್ನ 6126 ಮತಗಳನ್ನ ಪಡೆಯುವ ಮೂಲಕ ನೋಟಾ ಪಡೆದುಕೊಂಡಿದೆ.