ಧಾರವಾಡ “DDPU” ಕಚೇರಿ ಮೇಲೆ ಲೋಕಾಯುಕ್ತ ರೇಡ್- ‘ರೆಡ್‌ಹ್ಯಾಂಡ್’ ಸಿಕ್ಕಿಬಿದ್ದ ಇಬ್ಬರು ಅಧಿಕಾರಿಗಳು….

ಧಾರವಾಡ: ಡಿಡಿಪಿಯು ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಇಬ್ಬರು ಅಧಿಕಾರಿಗಳು ಬಿದ್ದ ಘಟನೆ ಧಾರವಾಡದ ಆರ್ ಎನ್ ಶೆಟ್ಟಿ ಮೈದಾನದ ಬಳಿ ಇರುವ ಡಿಡಿಪಿಯು ಕಚೇರಿಯಲ್ಲಿ ನಡೆದಿದೆ.
ಸೆಕ್ಷನ್ ಆಫೀಸರ್ ಹಾಗೂ FDA ಕೂಡಿಕೊಂಡು ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ನಿವೃತ್ತ ಶಿಕ್ಷಕ ಸುಭಾಸ ಜವರೆಡ್ಡಿ ಎಂಬುವವರಿಗೆ ಹಣದ ಬೇಡಿಕೆಯಿಡಲಾಗಿತ್ತು.
ಸೆಕ್ಷನ್ ಆಫೀಸರ್ ದುರ್ಗಾದಾಸ್ ಮಸೂತಿ, ನಾಗರಾಜ್ ಹೂಗಾರ್ ಕೂಡಿಕೊಂಡು ನಿವೃತ್ತ ಶಿಕ್ಷಕರಿಂದ 15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ ನಡೆದಿದೆ. ನಿವೃತ್ತ ವೇತನ ಹಣಕ್ಕಾಗಿ 15 ಸಾವಿರ ಡಿಮ್ಯಾಂಡ್ ಮಾಡಲಾಗಿತ್ತು. ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಬ್ಬಿ ನೇತೃತ್ವದಲ್ಲಿ ದಾಳಿ ನಡೆದಿದೆ.