ಧಾರವಾಡದ “ಲೇಡಿ ಚಿಂಗಂ” 2 ಲಕ್ಷ ಫೀಕಿದ್ದು ಎಲ್ಲಿ ಗೊತ್ತಾ… ಕುಕನನ್ನ ಇಟ್ಟುಕೊಂಡಿದ್ದೇಕೆ ಗೊತ್ತಾ…!?

ಧಾರವಾಡ: ಖಾಲಿ ಡಬ್ಬ ಯಾವಾಗಲೂ ಶಬ್ಧವನ್ನ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದ್ದರೂ ನಗರದಲ್ಲಿನ ಮಹಿಳಾ ಅಧಿಕಾರಿಯೊಬ್ಬರು ಶಬ್ಧ ಮಾಡುತ್ತ ನಡೆದಿದ್ದನ್ನ ಕರ್ನಾಟಕವಾಯ್ಸ್.ಕಾಂ ಎಳೆ ಎಳೆಯಾಗಿ ಬಿಚ್ಚಿಡುತ್ತ ನಡೆಯುತ್ತಿದ್ದ ಹಾಗೇ ಹಲವು ಬದಲಾವಣೆಗಳು ನಡೆದಿವೆ. ಆದರೆ, ಶಬ್ಧ ಮಾಡುವ ವಿಧಾನ ಬದಲಾಗಿದೆಯಂತೆ. ಅದಕ್ಕೊಂದು ತಾಜಾ ನಿದರ್ಶನ ಲಭಿಸಿದೆ.

ತನ್ನ ಅಧೀನದಲ್ಲಿರುವ ಪ್ರಿನ್ಸ್ ಎಂಬಾತನನ್ನ ಮುಂದೆ ಬಿಟ್ಟು ಮಣಕಿಲ್ಲಾದಲ್ಲಿರುವ ಅಬ್ಬುನಿಂದ ಎರಡು ಲಕ್ಷ ರೂಪಾಯಿ ಪೀಕಿದ್ದು ರಹಸ್ಯವಾಗಿ ಉಳಿದಿಲ್ಲ. ಅಷ್ಟೇ ಅಲ್ಲ, ತನ್ನ ಕಚೇರಿಯಲ್ಲಿನ ಬಲಗೈ ಭಂಟ ಕುಕನಿಂದ ವಸೂಲಿ ಇನ್ನೂ ‘ಶಬ್ಧ’ ಬಾರದಂತೆ ನೋಡಿಕೊಂಡು ನಡೆಯುತ್ತಿದೆ ಎಂಬುದು ಕೂಡ ಕೇಳಿ ಬರುತ್ತಿದೆ.
ಕರ್ನಾಟಕವಾಯ್ಸ್.ಕಾಂನಲ್ಲಿ ಹಲವು ಮಾಹಿತಿಗಳು ಹೊರಗೆ ಬಂದ ನಂತರ, ಮಾನ್ಯ ಖಾಲಿ ಡಬ್ಬ ಮಹಿಳಾ ಅಧಿಕಾರಿಯೂ ಪತಿಯನ್ನ ಕಚೇರಿಗೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ.
ಧಾರವಾಡದ ಇತಿಹಾಸದಲ್ಲಿಯೇ ಓರ್ವ ಮಹಿಳಾ ಅಧಿಕಾರಿ ತನ್ನ ಇಲಾಖೆಯ ಅತಿಥಿ ಗೃಹವನ್ನ ವರ್ಷಗಟ್ಟಲೇ ಮನೆ ಮಾಡಿಕೊಂಡಿದ್ದನ್ನ ಯಾರೊಬ್ಬರು ನೋಡಿರಲಿಲ್ಲ. ಅದನ್ನೀಗ ಮೊದಲ ಬಾರಿಗೆ ನೋಡುವಂತಾಗಿರುವುದು ಸೋಜಿಗದ ಸಂಗತಿಯಾಗಿದೆ.