ಧಾರವಾಡ: ಸರಕಾರಿ ಕಾಲೇಜಿಗೆ ಕಾಯಕಲ್ಪದ ಭರವಸೆ ನೀಡಿದ ಜಿಲ್ಲಾಡಳಿತ: KV Impact…

ಧಾರವಾಡ: ಸೋರುತ್ತಿರುವ ಸರಕಾರಿ ಪದವಿ ಕಾಲೇಜಿನಲ್ಲಿ “ಛತ್ರಿಯಡಿ ಅಭ್ಯಾಸ್”ದ ಬಗ್ಗೆ ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕಿದ ನಂತರ ಜಿಲ್ಲಾಡಳಿತ ಎಚ್ಚಂತೆ ತೋರಿಸಿಕೊಂಡಿದ್ದು, ಸಧ್ಯ ಗಮನವನ್ನಾದರೂ ಸೆಳೆಯಲಾಗಿದೆ ಎಂಬ ಸಮಾಧಾನವಾಗಿದೆ.
ಮಾಹಿತಿಯ ಪ್ರಕಾರ ಹೊಸ ಕಟ್ಟಡವನ್ನ ಹತ್ತು ತಿಂಗಳ ಅವಧಿಯಲ್ಲಿ ಮಾಡಿಕೊಡುವಂತೆ ಡಿಸಿಯವರು ಸಂಬಂಧಿಸಿದ ಇಲಾಖೆಯ ಇಂಜಿನಿಯರ್‌ಗಳಿಗೆ ತಾಕೀತು ಮಾಡಿದ್ದಾರೆಂದು ಗೊತ್ತಾಗಿದೆ. ಅಷ್ಟೇ ಅಲ್ಲ, ಸೋರುತ್ತಿರುವ ಕಟ್ಟಡದ ಕೆಲವು ಭಾಗಕ್ಕೆ ತಾತ್ಕಾಲಿಕ ರಿಪೇರಿ ಮಾಡುವ ಭರವಸೆಯೂ ಸಿಕ್ಕಿದೆಯಂತೆ.
ನೊಂದ ವಿದ್ಯಾರ್ಥಿನಿಯರ ಮಾತುಗಳು…
ಸರಕಾರಿ ಪದವಿ ಕಾಲೇಜಿನ ಪ್ರತಿ ಕೊಠಡಿಯೂ ಸೋರುತ್ತಿರುವ ಬಗ್ಗೆಯೂ, ಜಿಲ್ಲಾ ಉಸ್ತುವಾರಿ ಸಚಿವರು ಕಳೆದ ವರ್ಷ ಬಂದು ಹೋಗಿರುವ ಕುರಿತು ‘ಕೆವಿ’ ಗಮನ ಸೆಳೆದಿತ್ತು.
ಈಗಲಾದರೂ ಎಚ್ಚರವಾದಂತೆ ತೋರಿಸಿಕೊಂಡಿರುವ ಜಿಲ್ಲಾಡಳಿತ, ಮುಗಿಯುವವರೆಗೂ ಗಮನ ಕೊಡುತ್ತಾ ಅಥವಾ ಮತ್ತೊಂದು ಮಳೆ ಬರುವವರೆಗೆ ಕಾಯುತ್ತಾ ಎಂಬುದನ್ನ ಕಾದು ನೋಡಬೇಕಿದೆ.