ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತನಿಗೆ “ಕೆಎಂಎಫ್”ನಿಂದ ಗೇಟ್ ಪಾಸ್ ನೀಡಿದ ಶಾಸಕ ಅಮೃತ ದೇಸಾಯಿ ಪಡೆ…!

ಧಾರವಾಡ: ಹಾವೇರಿ, ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲೆ ವ್ಯಾಪ್ತಿ ಹೊಂದಿರುವ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಶಂಕರ ಮುಗದ ಆಯ್ಕೆಯಾದರು.

ಹಾಲಿ ಅಧ್ಯಕ್ಷ ಬಸವರಾಜ ಅರಬಗೊಂಡ ಅವರ ವಿರುದ್ಧ ಅವಿಶ್ವಾಸ ಮಂಡನೆಯಾದ ನಂತರ ನಡೆದ ಆಯ್ಕೆಯಲ್ಲಿ ಶಂಕರ ಮುಗದ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡರು. ಈ ಹಿಂದೆಯೂ ಶಂಕರ ಮುಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಒಕ್ಕೂಟದ 12 ನಿರ್ದೇಶಕರ ಪೈಕಿ 7 ನಿರ್ದೇಶಕರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಹಿ ಮಾಡಿದ ಹಿನ್ನೆಲೆಯಲ್ಲಿ ಈ ಆಯ್ಕೆ ನಡೆದಿದೆ. 2019ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಅರಬಗೊಂಡ ಅವರು ಇಂದು ಅಧಿಕಾರ ಕಳೆದುಕೊಂಡರು.
ಮೂಲತಃ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಶಂಕರ ಮುಗದ ಅವರು ಹಲವು ವರ್ಷಗಳಿಂದ ಕೆಎಂಎಫ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಅಧ್ಯಕ್ಷರಾಗಿಯೂ ಉತ್ತಮ ಕಾರ್ಯನಿರ್ವಹಣೆ ಮಾಡಿದ್ದರು. ಇದೀಗ ಮತ್ತೆ ಅಧ್ಯಕ್ಷರಾಗಿರುವುದು ಅವರ ಜಾಣ್ಮೆಯನ್ನ ತೋರಿಸತ್ತೆ.
ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ವಲಯದ ಬಸವರಾಜ ಅರಬಗೊಂಡ ಅವರನ್ನ ಕೊನೆ ಕ್ಷಣದಲ್ಲಿ ಕೆಎಂಎಫ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಅಂದು ಅಧಿಕಾರ ಸಿಗಬಹುದಾಗಿದ್ದ ಶಂಕರ ಮುಗದ ಅವರನ್ನ ಅಧಿಕಾರದಿಂದ ದೂರವಿರಿಸುವ ಪ್ರಯತ್ನ ನಡೆದಿತ್ತು. ಇಂದು ನಡೆದ ಮತದಾನದ ವೇಳೆಯಲ್ಲಿ ಹತ್ತು ಮತಗಳು ಅವಿಶ್ವಾಸದ ಪರವಾಗಿ ಬಿದ್ದವು.