ಧಾರವಾಡದ ಉಪತಹಶೀಲ್ದಾರ್, ಕೆಎಲ್‌ಆರ್ ಸೇರಿ ಹಲವರಿಂದ ಭೂ ಕಬಳಿಸಿ, ಕೋಟಿ ಕೋಟಿ ಹಣ ವಂಚನೆ- FIR
1 min readಧಾರವಾಡ: ರೈತರ ಭೂಮಿಯನ್ನ ಕಬಳಿಸಿ ಹಣವನ್ನ ವಂಚನೆ ಮಾಡಿದ್ದಾರೆಂಬ ಆರೋಪದ ಮೇಲೆ ಧಾರವಾಡದ ಕೆಎಲ್‌ಆರ್ ಮೊದಲ ಆರೋಪಿಯಾಗಿದ್ದು, ಎರಡನೇಯ ಆರೋಪಿ ಧಾರವಾಡದ ಉಪತಹಶೀಲ್ದಾರರಾಗಿದ್ದಾರೆ.
ರೈತ ಕರೆಪ್ಪ ಪೂಜಾರ ಎಂಬುವವರಿಗೆ ಸೇರಿದ ಭೂಮಿಯನ್ನ ಮಾರಾಟ ಮಾಡಿ, ಅದರಿಂದ 2ಕೋಟಿ 75ಲಕ್ಷ ರೂಪಾಯಿ ಹಣ ತೆಗೆಯಲಾಗಿದೆ. ಈ ಬಗ್ಗೆ ದೂರು ನೀಡಿದ್ದು, ಇದರಲ್ಲಿ ಉಪತಹಶೀಲ್ದಾರ ಪ್ರವೀಣ ಪೂಜಾರ ಮೇಲೂ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಹದಿಮೂರು ಆರೋಪಿಗಳಿದ್ದು, 8 ನೇ ಆರೋಪಿಯಾಗಿರುವ ಮುದ್ದಿ ಎಂಬಾತನ ವಿರುದ್ಧ ಇಲಾಖೆಯ ಇಂದು ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ.