ಧಾರವಾಡದಲ್ಲಿ “ಬೃಹತ್ ED ದಾಳಿ”- ರಾಜಕಾರಣಿಗಳಿಗೂ ನಂಟು: ಬಡವರ ಮಗನ ಹೋರಾಟದ ಫಲ…

ಧಾರವಾಡ: ಕೆಐಎಡಿಬಿ ಕಚೇರಿಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹದಿನೈದಕ್ಕೂ ಹೆಚ್ಚು ಅಧಿಕಾರಿಗಳು ನೂರಾರೂ ಕೋಟಿ ರೂಪಾಯಿ ಲೂಟಿಯನ್ನ ಪತ್ತೆ ಹಚ್ಚುತ್ತಿದ್ದಾರೆ.
Exclusive ವೀಡಿಯೋ…
ಈ ಮೂಲಕ ಸರಕಾರದ ಹಣವನ್ನ ಉಳಿಸುವುದಲ್ಲದೇ, ನೂರೆಂಟು ರೈತರಿಗೆ ಅನುಕೂಲ ಮಾಡಿದ್ದು, ಬಡವರ ಮಗ ಬಸವರಾಜ ಕೊರವರ.
ರೈತರ ಜಮೀನನ್ನ ಭೂ ಸ್ವಾಧೀನ ಮಾಡುವ ಸಮಯದಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ಕೋಟಿ ಕೋಟಿ ಹಣವನ್ನ ಕೊಳ್ಳೆ ಹೊಡೆಯಲಾಗಿತ್ತು. ಈ ವಿಷಯದ ಪ್ರತಿಯೊಂದು ಮಜಲನ್ನ ಬೆನ್ನು ಹತ್ತಿದ್ದ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರು, ಹಗರಣವನ್ನ ಹೊರ ಹಾಕಿದ್ದರು.
Exclusive Video…
ಹಗರಣ ಹೊರ ಬಿದ್ದ ನಂತರ ಅಧಿಕಾರಿಗಳು, ಏಜೆಂಟರು ಜೈಲು ಪಾಲಾಗಿದ್ದರು. ಅಷ್ಟಕ್ಕೆ ಸುಮ್ಮನಿರದೇ ಹಣವನ್ನ ಸರಕಾರದ ಖಜಾನೆಗೆ ಮರಳಿಸಲೇಬೇಕು ಎಂದುಕೊಂಡು ಹೋರಾಟ ಮುಂದುವರೆಸಿದ್ದ ಬಸವರಾಜ್ ಅವರಿಗೆ, ಇಂದಿನ ಇಡಿ ದಾಳಿಯಿಂದ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ಮೂರು ಇನ್ನೊವಾ ವಾಹನದಲ್ಲಿ ಬಂದಿಳಿದಿರುವ 15 ಕ್ಕೂ ಹೆಚ್ಚು ಅಧಿಕಾರಿಗಳು, ಪ್ರತಿಯೊಂದು ದಾಖಲೆಯನ್ನ ಪರಿಶೀಲನೆ ಮಾಡುತ್ತಿದ್ದಾರೆ.